ADVERTISEMENT

ಉಪ್ಪಿನಂಗಡಿ: ವಾರಸುದಾರರಿಗೆ ಪರ್ಸ್‌ ಹಸ್ತಾಂತರಿಸಿ ಪ್ರಾಮಾಣಿಕತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:00 IST
Last Updated 20 ಜುಲೈ 2025, 6:00 IST
ಉಪ್ಪಿನಂಗಡಿ ಬಳಿ ರಸ್ತೆಯಲ್ಲಿ ಸಿಕ್ಕಿದ್ದ ಪರ್ಸ್‌ ಅನ್ನು ಸಿದ್ದಿಕ್ ಅವರು ಪೊಲೀಸರಿಗೆ ಹಸ್ತಾಂತರಿಸಿದರು
ಉಪ್ಪಿನಂಗಡಿ ಬಳಿ ರಸ್ತೆಯಲ್ಲಿ ಸಿಕ್ಕಿದ್ದ ಪರ್ಸ್‌ ಅನ್ನು ಸಿದ್ದಿಕ್ ಅವರು ಪೊಲೀಸರಿಗೆ ಹಸ್ತಾಂತರಿಸಿದರು   

ಉಪ್ಪಿನಂಗಡಿ: ಕೊಯಿಲದ ನಿವಾಸಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಸಿಕ್ಕಿದ ಹಣವಿದ್ದ ಪರ್ಸ್‌ ಅನ್ನು ಪೊಲೀಸರ ಮೂಲಕ ಅದರ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಸಿದ್ದಿಕ್ ಅವರು ಕರಾಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದಾಗ ಕರಾಯ ಎಂಬಲ್ಲಿ ರಸ್ತೆ ಮಧ್ಯದಲ್ಲಿ ಪರ್ಸ್‌ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಹಣವಿದ್ದು, ಅದರಲ್ಲಿ ಇದ್ದ ವಿಳಾಸವನ್ನು ನೋಡಿ ಪರ್ಸ್‌ ಸಿಕ್ಕಿರುವುದಾಗಿ ತಿಳಿಸಿ ಪರ್ಸ್‌ ಅನ್ನು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಪೊಲೀಸರು ಪರ್ಸ್‌ ಅನ್ನು ಅದರ ವಾರಸುದಾರ ಕೆಮ್ಮಾರ ನಿವಾಸಿ ಶ್ರೀಸ ಕುಮಾರ್ ಅವರಿಗೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT