
ಮಂಗಳೂರು: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ, ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸುವ ಕೆಲವು ಬಸ್‌ಗಳ ಪ್ರಯಾಣ ದರವನ್ನು ಶೇ 10ರಿಂದ 15ರಷ್ಟು ಕಡಿತಗೊಳಿಸಲಾಗಿದ್ದು, ಜ.5ರಿಂದ ಜಾರಿಯಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಅಂಬಾರಿ ಉತ್ಸವ: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು - ಕುಂದಾಪುರ ಪ್ರಯಾಣ ದರ (ಪ್ರತಿ ಪ್ರಯಾಣಿಕರಿಗೆ)- ₹1,510, ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ ₹1,460, ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು ₹1,350.
ಡ್ರೀಮ್ ಕ್ಲಾಸ್: ಕುಂದಾಪುರ- ಬೆಂಗಳೂರು ₹1,350, ಉಡುಪಿ- ಬೆಂಗಳೂರು ಹಾಗೂ ₹1,300, ಮಂಗಳೂರು- ಬೆಂಗಳೂರು ₹1200.
ಮಲ್ಟಿ ಆಕ್ಸಿಲ್-2.0: ಕುಂದಾಪುರ- ಬೆಂಗಳೂರು ₹1,310, ಉಡುಪಿ- ಬೆಂಗಳೂರು₹1,250 ರೂ, ಮಂಗಳೂರು- ಬೆಂಗಳೂರು ₹1,150.
ಮಲ್ಟಿ ಆಕ್ಸಿಲ್ : ಕುಂದಾಪುರ- ಬೆಂಗಳೂರು ₹1,110, ಉಡುಪಿ- ಬೆಂಗಳೂರು ₹1060, ಮಂಗಳೂರು- ಬೆಂಗಳೂರು ₹1,000.
ನಾನ್ ಎಸಿ ಸ್ಲೀಪರ್: ಕುಂದಾಪುರ- ಬೆಂಗಳೂರು₹1,050, ಉಡುಪಿ- ಬೆಂಗಳೂರು ₹1,000, ಮಂಗಳೂರು- ಬೆಂಗಳೂರು ₹900.
ಪಲ್ಲಕ್ಕಿ ನಾನ್ ಎಸಿ ಸ್ಲೀಪರ್: ಕುಂದಾಪುರ- ಬೆಂಗಳೂರು ₹1,100, ಉಡುಪಿ- ಬೆಂಗಳೂರು ₹1,060, ಮಂಗಳೂರು- ಬೆಂಗಳೂರು ₹950.
ರಾಜಹಂಸ: ಕುಂದಾಪುರ- ಬೆಂಗಳೂರು ₹750, ಉಡುಪಿ- ಬೆಂಗಳೂರು ₹700, ಮಂಗಳೂರು- ಬೆಂಗಳೂರು ₹650.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.