
ಪ್ರಜಾವಾಣಿ ವಾರ್ತೆ
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದೇವಳದ ಹೊರಾಂಗಣದಲ್ಲಿ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆ ನೆರವೇರಿಸಿದರು.
ಹೊರಾಂಗಣದಲ್ಲಿ ಸುತ್ತಲೂ ಹಾಕಿದ್ದ ಬಾಳೆ ಎಲೆ, ಅದಕ್ಕೆ ಬಡಿಸಿದ್ದ ದೇವರ ನೈವೇದ್ಯವನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತವರು ಉರುಳು ಸೇವೆ ನೆರವೇರಿಸಿದರು. ಅದಕ್ಕೂ ಮೊದಲು ಸೇವೆ ಮಾಡುವ ಭಕ್ತರು ದರ್ಪಣ ತೀರ್ಥದಲ್ಲಿ ಮಿಂದು ಅಲ್ಲಿಂದ ಸರತಿ ಸಾಲಿನಲ್ಲಿ ಬಂದು ಎಡೆ ಸೇವೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.