ADVERTISEMENT

ಕುಕ್ಕೆ ಸುಬ್ರಮಣ್ಯ: ಬೆಳ್ಳಿ ರಥ ಸಮರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:12 IST
Last Updated 10 ನವೆಂಬರ್ 2025, 5:12 IST
<div class="paragraphs"><p>ಕುಕ್ಕೆ ಸುಬ್ರಮಣ್ಯ ಬೆಳ್ಳಿ ರಥ ಸಮರ್ಪಣೆ</p></div>

ಕುಕ್ಕೆ ಸುಬ್ರಮಣ್ಯ ಬೆಳ್ಳಿ ರಥ ಸಮರ್ಪಣೆ

   

ಸುಬ್ರಹ್ಮಣ್ಯ: ಸುಳ್ಯದ ಅಕಾಡೆಮಿ ಆಫ್ ಲಿಬರಲ್‌ಎಜುಕೇಶನ್ ಕಮಿಟಿ ಬಿ.ಅಧ್ಯಕ್ಷ ಡಾ.ರೇಣುಕಾ ಪ್ರಸಾದ್‌ ಕೆ.ವಿ.ಮತ್ತು ಕುಟುಂಬದವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥದ ಸಮರ್ಪಣೆ ಕಾರ್ಯಕ್ರಮ ನ.10ರಂದು ಜರುಗಲಿದೆ.

ಕೋಟೇಶ್ವರ ಬಿ.ಲಕ್ಷ್ಮಿನಾರಾಯಣ ಆಚಾರ್ಯ ಮತ್ತು ಗೋಪಾಲಾಚಾರ್ಯ ಅವರು ನಿರ್ಮಿಸಿಕೊಟ್ಟ ಬೆಳ್ಳಿರಥ ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿತ್ತು. ಬೆಳ್ಳಿರಥವನ್ನು ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಅಂಗವಾಗಿ ಭಾನುವಾರ ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ಜರುಗಿತು. ಅರ್ಚಕರು ಪೂಜಾ ವಿಧಾನಗಳನ್ನು ನೆರವೇರಿಸಿದರು.

ADVERTISEMENT

ಎಒಎಲ್‌ಇ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್‌ಕೆ.ವಿ., ಮನೆಯವರಾದ ಡಾ.ಜ್ಯೋತಿ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್ ಕುರುಂಜಿ, ಡಾ.ಅಬಿಜ್ನಾ ಗೋಕುಲ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರು, ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರು, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇಂದು ಸಮರ್ಪಣೆ: ನ.10ರಂದು ಬೆಳಿಗ್ಗೆ ಗಂಟೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಪೂರ್ಣಾಹುತಿಗೊಂಡು, ನಂತರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುತ್ತದೆ. ರಾತ್ರಿ 8ಕ್ಕೆ ಪ್ರಥಮ ಬೆಳ್ಳಿರಥ ಸೇವೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.