ಸುಬ್ರಹ್ಮಣ್ಯ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ನಡೆಯುತ್ತಿರುವ 55ನೇ ವರ್ಷದ ಗಣೇಶೋತ್ಸವದಲ್ಲಿ ಮಹಾಗಣಪತಿಗೆ ರಜತ ಪ್ರಭಾವಳಿ ಸಮರ್ಪಿಸಲಾಯಿತು.
ಪುರೋಹಿತ ರಮಾನಂದ ಭಟ್ ಅವರು ವೈದಿಕ ವಿಧಿ–ವಿಧಾನ ನೆರವೇರಿಸಿದರು.
ಮಹಾಗಣಪತಿಯನ್ನು ವಿಗ್ರಹ ಶಿಲ್ಪಿ, ಬ್ಯಾಂಕ್ ಪ್ರಬಂಧಕ ಕೃಷ್ಣ ಪ್ರಸಾದ್ ಸುಬ್ರಹ್ಮಣ್ಯ ಅವರ ಮನೆಯಿಂದ ಮೆರವಣಿಗೆಯಲ್ಲಿ ತರಲಾಯಿತು. ಸಮಿತಿ ಅಧ್ಯಕ್ಷ ಕೆ.ಯಜ್ಞೇಶ್ ಆಚಾರ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೊಗ್ರ ಅವರು ಸುಮಾರು 11.600 ಕೆ.ಜಿಯ ₹ 16 ಲಕ್ಷ ಮೌಲ್ಯದ ಪ್ರಭಾವಳಿಯನ್ನು ಸಮರ್ಪಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಎ.ವೆಂಕಟ್ರಾಜ್, ಟ್ರಸ್ಟ್ ಪದಾಧಿಕಾರಿಗಳು, ಸಮಿತಿ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು. ನಂತರ ಗಣಪತಿ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.