ADVERTISEMENT

ಅಂತರರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಗೇಮ್ಸ್: ಪದ್ಮನಾಭ ಕುಮಾರ್‌ಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:20 IST
Last Updated 3 ಮಾರ್ಚ್ 2026, 7:20 IST
ಪದ್ಮನಾಭ ಕುಮಾರ್ 
ಪದ್ಮನಾಭ ಕುಮಾರ್    

ಮಂಗಳೂರು: ಇತ್ತೀಚೆಗೆ ಅಬುದಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಗೇಮ್ಸ್ 2026ರಲ್ಲಿ ಮಂಗಳೂರಿನ ವಕೀಲ ಡಿ.ಪದ್ಮನಾಭ ಕುಮಾರ್ ಅವರು ಓಟ ಮತ್ತು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದಿದ್ದಾರೆ. 

ಕ್ರೀಡಾಕೂಟದಲ್ಲಿ ಭಾಗವಹಿಸಿದ ತಮ್ಮ ಅನುಭವವನ್ನು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಪದ್ಮನಾಭ ಕುಮಾರ್, ‘125 ರಾಷ್ಟ್ರಗಳ ಸುಮಾರು 25 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ನಾನು 100, 200, 400 ಮೀ ಓಟ ಮತ್ತು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಈ ಹಿಂದೆ 2014 ಮತ್ತು 2015ನೇ ಇಸವಿಯಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಾಂಪಿಯನ್ ಆಗಿದ್ದೆ. ಒಟ್ಟು ಎಂಟು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. 2027ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್‌ನಲ್ಲಿಯೂ ಭಾಗವಹಿಸುತ್ತೇನೆ’ ಎಂದರು. 

ಸಚ್ಚಿದಾನಂದ ಕಾಮತ್, ಕೆ. ಭಾಸ್ಕರ್ ರಾವ್, ಮೀನಾ ಟೆಲ್ಲಿಸ್ ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.