ಮಂಗಳೂರು: ಉಜಿರೆಯ ವಸತಿಗೃಹ ವೊಂದರ ಕೊಠಡಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣದ ಅಪರಾಧಿ ಚಿಕ್ಕಮಗಳೂರಿನ ಬಾಳಪ್ಪ ಎಂ. ಕಳ್ಳೊಳ್ಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
01-03-2014ರಂದು ಚಿಕ್ಕಮಗಳೂರಿನ ಭಾಗ್ಯ ಎಂಬುವರೊಂದಿಗೆ ವಸತಿಗೃಹದಲ್ಲಿ ರೂಂ ಪಡೆದಿದ್ದ. ವಸತಿಗೃಹದ ವ್ಯವಸ್ಥಾಪಕ ಆ ದಿನ ರಾತ್ರಿ ರೂಂ ಬಳಿ ಹೋಗಿ ನೋಡಿದಾಗ ಮಹಿಳೆ ಬಾತ್ ರೂಂನಲ್ಲಿ ಅರೆನಗ್ನಳಾಗಿ ಬಿದ್ದು ಮೃತಪಟ್ಟಿದ್ದು, ಬಾಳಪ್ಪ ಪರಾರಿಯಾಗಿದ್ದ ಎಂದು ಪ್ರಕರಣ ದಾಖಲಾಗಿತ್ತು.
ಬೆಳ್ತಂಗಡಿ ಇನ್‌ಸ್ಪೆಕ್ಟರ್ ಲಿಂಗಪ್ಪ ಪೂಜಾರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನೂ ಸೇರಿಸಿ ಆಗಿನ ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್ ಶಹಾಪುರ ಅವರು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತು ಸೆಷನ್ಸ್ ನ್ಯಾಯಾಲಯದ ನ್ಯಾಯಾ ಧೀಶ ಜಗದೀಶ್ ಅವರು ಬಾಳಪ್ಪ ಎಂ ಕಳ್ಳೊಳ್ಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪಿ. ನಾಯಕ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.