ADVERTISEMENT

ಯುವ ಹೃದಯಗಳಲ್ಲಿ ಅಹಿಂಸಾ ಮನೋಭಾವ ಮೂಡಿಸಿ: ಅಬ್ದುಲ್ ನಾಸೀರ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 2:50 IST
Last Updated 29 ಅಕ್ಟೋಬರ್ 2024, 2:50 IST
<div class="paragraphs"><p>ಮಿಲಾದ್ ಪ್ರತಿಭೋತ್ಸವದ ಸಮಾರೋಪ ಸಮಾರಂಭದಲ್ಲಿ ನಝೀರ್ ಬಜಾಲ್ ಮಾತನಾಡಿದರು</p></div>

ಮಿಲಾದ್ ಪ್ರತಿಭೋತ್ಸವದ ಸಮಾರೋಪ ಸಮಾರಂಭದಲ್ಲಿ ನಝೀರ್ ಬಜಾಲ್ ಮಾತನಾಡಿದರು

   

ಮಂಗಳೂರು: ಬಜಾಲ್-ನಂತೂರು ಬದ್ರಿಯಾ ಜುಮ್ಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಮೂರು ದಿನಗಳ ‘ಮಿಲಾದ್ ಪ್ರತಿಭೋತ್ಸವ’ ಭಾನುವಾರ ಮುಕ್ತಾಯಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸೀರ್ ಸಅದಿ, ಮಕ್ಕಳು ಪ್ರತಿಭಾವಂತರಾಗಲು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಅಗತ್ಯ. ಮದರಸ ಶಿಕ್ಷಣ ಪಡೆದವರು ಅಹಂಕಾರಿ ಆಗಲಾರರು. ಯುವ ಹೃದಯಗಳಲ್ಲಿ ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ತಿಳಿಹೇಳಬೇಕು. ಅಹಿಂಸಾ ಮನೋಭಾವ ಮೂಡಿಸಬೇಕು. ಮಾದಕ ಪದಾರ್ಥ ಬಳಕೆ ಇಸ್ಲಾಮಿನಲ್ಲಿ ನಿಷಿದ್ಧವಾಗಿದ್ದು, ಇದರ ವಿರುದ್ಧ ಜಾಗೃತಿ ಮತ್ತಷ್ಟು ನಡೆಯಬೇಕು ಎಂದರು.

ADVERTISEMENT

ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ, ಇಸ್ಲಾಂನ ಧಾರ್ಮಿಕ ವಿಚಾರಗಳನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 95ರಷ್ಟು ಅಂಕ ಪಡೆದ ಬದ್ರಿಯಾ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹನ್ಸಿದಾ ಬಾನು ಅವರನ್ನು ಗೌರವಿಸಲಾಯಿತು. ಜೆ.ಎಫ್ ಅಸೋಸಿಯೇಷನ್ ಬಜಾಲ್, ಕಿದ್ಮತುಲ್ ಇಸ್ಲಾಂ ಖುತುಬಿಯ್ಯತ್ ಕಮಿಟಿ ವತಿಯಿಂದ ಹಯಾತುಲ್ ಇಸ್ಲಾಂ ಮದರಸ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

ಬಜಾಲ್ ಕಾರ್ಪೊರೇಟರ್ ಅಶ್ರಫ್.ಕೆ, ಬಿ.ಜೆ.ಎಂ ಉಪಾಧ್ಯಕ್ಷರಾದ ಎಚ್.ಎಸ್.ಹನೀಫ್, ಎಂ.ಎಚ್.ಮೊಹಮ್ಮದ್, ಫೈಸಲ್ ನಗರ ಗೌಸಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಬಿ.ಜೆ.ಎಂ ಮಾಜಿ ಅಧ್ಯಕ್ಷ ಬಿ.ಎನ್.ಅಬ್ಬಾಸ್, ಸಂಚಾಲಕ ಬಿ.ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಬ್ದುಲ್ ಸಲಾಂ, ನಝೀರ್ ಬಜಾಲ್, ಇಕ್ಬಾಲ್ ಅಹ್ ಸನಿ, ಯೂಸುಫ್ ಕುಂಬ್ಲಳಿಕೆ, ಹನೀಫ್ ಕೆಳಗಿನಮನೆ, ಮೊಯ್ದೀನ್ ಕುಂಞಿ, ಹನೀಫ್ ಬೈಂಕಪಾಡಿ, ಜೆ.ಎ.ಫ್ ಅಸೋಶಿಯೇಷನ್ ಉಪಾಧ್ಯಕ್ಷ ಸೌಕತ್ ಇಬ್ರಾಹಿಂ, ಮೊಹಮ್ಮದ್ ಹಕೀಝ್, ಬಜಾಲ್ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಹಮ್ಮಬ್ಬ ಮೋನಾಕ, ಫೈಸಲ್ ನಗರ ಗೌಸಿಯಾ ಜುಮ್ಮಾ ಮಸೀದಿಯ ಖತೀಬ್ ಝುಬೈರ್ ದಾರಿಮಿ, ಶಾಂತಿನಗರ ತರ್ಬಿಯತುಲ್ ಇಸ್ಲಾಮಿನ ಮುದರ್ರಿಸ್ ಮಿಕ್ದಾದ್ ಹಾಶಿಮಿ, ಅಬ್ದುಲ್ ರಹಿಮಾನ್ ಮದನಿ, ಸಮೀರ್ ಸಅದಿ ಮತ್ತಿತರರು ಇದ್ದರು.

ಅಬ್ದುಲ್ ಹಕೀಂ ಮದನಿ ಕಾರ್ಯಕ್ರಮ ನಿರೂಪಿಸಿದರು. ಅಬೂಬಕ್ಕರ್ ಸಖಾಫಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.