ADVERTISEMENT

ಮೂಡುಬಿದಿರೆ ಕಂಬಳ: ಮಕ್ಕಳಿಗೂ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:15 IST
Last Updated 2 ಜನವರಿ 2026, 7:15 IST
   

ಮೂಡುಬಿದಿರೆ: ಇಲ್ಲಿನ ಕೋಟಿ-ಚನ್ನಯ ಜೋಡುಕರೆ ಕಂಬಳದ ಕರೆಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರ ವಾಹನ ನಿಲುಗಡೆಗೆ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ತಿಳಿಸಿದರು.

23ನೇ ವರ್ಷದ ಮೂಡುಬಿದಿರೆ ಕಂಬಳದ ಅಂಗವಾಗಿ ಒಂಟಿಕಟ್ಟೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಬಾರಿಯ ವಿಶೇಷತೆಯಾಗಿ ಅಬ್ಬಕ್ಕ ರಾಣಿಯ 500ನೇ ಜನ್ಮ ವರ್ಷಾಚರಣೆ ನೆನಪಿಗಾಗಿ 500 ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ‘ಮೂಡುಬಿದಿರೆ ಕಂಬಳವು ಈ ಹಿಂದೆ 228 ಜೊತೆ ಕೋಣಗಳು ಭಾಗವಹಿಸಿದ ದಾಖಲೆ ಹೊಂದಿದೆ. ಇಲ್ಲಿ ಸಮಯಪಾಲನೆಗೆ ಆದ್ಯತೆ ನೀಡಲಾಗುವುದು. ನೇರ ಪ್ರಸಾರವಿರುವುದರಿಂದ ಪ್ರತಿಯೊಂದು ಹಂತದಲ್ಲೂ ಶಿಸ್ತು ಮತ್ತು ಎಚ್ಚರ ಅಗತ್ಯ’ ಎಂದರು.

ಸಭೆಯಲ್ಲಿ ಕೋಶಾಧಿಕಾರಿ ಭಾಸ್ಕರ್ ಕೋಟ್ಯಾನ್, ಉಪಾಧ್ಯಕ್ಷ ಸುರೇಶ್ ಕೆ.ಪೂಜಾರಿ, ಕಾರ್ಯದರ್ಶಿ ರಂಜಿತ್ ಪೂಜಾರಿ, ರಾಜ್ಯ ಕಂಬಳ ಅಸೋಸಿ ಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಪ್ರಮುಖರಾದ ಶಾಂತಿಪ್ರಸಾದ್ ಹೆಗ್ಡೆ, ನಾಗರಾಜ ಪೂಜಾರಿ, ಭುವನಾಭಿರಾಮ ಉಡುಪ, ಈಶ್ವರ ಕಟೀಲು, ದಿನೇಶ್ ಪುತ್ರನ್, ಹರಿಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.