ADVERTISEMENT

ಮೋಹನ ಆಳ್ವರಿಗೆ ಡಾ.ಜಿ.ಪಿ ರಾಜರತ್ನಂ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 5:48 IST
Last Updated 6 ಜೂನ್ 2025, 5:48 IST
ಮೋಹನ ಆಳ್ವ
ಮೋಹನ ಆಳ್ವ   

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕ ಡಾ.ಮೋಹನ ಆಳ್ವ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡಿದ 2020-21ನೇ ಸಾಲಿನ ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕೇತ್ರದಲ್ಲಿ ಈಚೆಗೆ ಪ್ರದಾನ ಮಾಡಲಾಯಿತು.‌

17 ವರ್ಷಗಳಿಂದ ನಡೆದುಕೊಂಡು ಬಂದ 'ಆಳ್ವಾಸ್ ನುಡಿಸಿರಿ' ಕನ್ನಡ ಸಾಹಿತ್ಯ ಸಮ್ಮೇಳನ, 30 ವರ್ಷಗಳಿಂದ ನಿರಂತರರ ಆಯೋಜನೆಗೊಳ್ಳುತ್ತಿರುವ 'ಆಳ್ವಾಸ್ ವಿರಾಸತ್' ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯೆಂದು ಗೌರವಕ್ಕೆ ಪಾತ್ರವಾಗಿರುವ ಸಂಪೂರ್ಣ ಉಚಿತ ಶಿಕ್ಷಣದ 'ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ', ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಆಳ್ವಾಸ್ ಧೀಂಕೀಟ ಯಕ್ಷಗಾನ ಅಧ್ಯಯನ ಕೇಂದ್ರಗಳ ಮೂಲಕ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿಗಳಿಗೆ ನೀಡಿದ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT