ADVERTISEMENT

ಉಳ್ಳಾಲ: ಎಫ್‌ಐಆರ್ ದಾಖಲಿಸದ್ದಕ್ಕೆ ಸಂಸ ಚೌಟ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 16:18 IST
Last Updated 4 ಜೂನ್ 2025, 16:18 IST
ಮಂಜನಾಡಿ ದುರಂತದಲ್ಲಿ ಬದುಕುಳಿದ ಮಕ್ಕಳ ತಂದೆ ಸೀತಾರಾಮ ಅವರಿಗೆ ಸಂಸದ ಬೃಿಜೇಶ್‌ ಚೌಟ ಧೈರ್ಯ ತುಂಬಿದರು.
ಮಂಜನಾಡಿ ದುರಂತದಲ್ಲಿ ಬದುಕುಳಿದ ಮಕ್ಕಳ ತಂದೆ ಸೀತಾರಾಮ ಅವರಿಗೆ ಸಂಸದ ಬೃಿಜೇಶ್‌ ಚೌಟ ಧೈರ್ಯ ತುಂಬಿದರು.   

ಉಳ್ಳಾಲ: ಘಟನೆ ನಡೆದು ಐದು ದಿನ ಕಳೆದಿದ್ದು, ದೂರು ನೀಡಿದರೂ ಎಫ್‌ಐಆರ್ ಯಾಕೆ ಹಾಕಿಲ್ಲ? ಎಲ್ಲದಕ್ಕೂ ಹಿರಿಯ ಅಧಿಕಾರಿಗಳೇ ಹೇಳಬೇಕೆಂದಾದರೆ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಯಾಕಿರಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೊಣಾಜೆ ಠಾಣಾಧಿಕಾರಿಯನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.

ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮಂಜನಾಡಿ ಉರುಮನೆಕೋಡಿ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ ಮತ್ತು ಅವರ ಪತಿ ಸೀತಾರಾಮ ಅವರ ತಂದೆ ಕಾಂತಪ್ಪ ಪೂಜಾರಿ ಆರೋಗ್ಯ ವಿಚಾರಿಸಿದರು.

ಸೀತಾರಾಮ ಪೂಜಾರಿ, ಸಹೋದರ ಪವನ್ ಕುಮಾರ್‌, ಬಾಮೈದ ಮವೀನ್ ಅವರು ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಅವೈಜ್ಞಾನಿಕ ರಸ್ತೆ ನಿರ್ಮಾಣವೂ ದುರಂತಕ್ಕೆ ಒಂದು ಕಾರಣವೆಂದು ದೂರು ನೀಡಿದ್ದರೂ, ಇಂಜಿನಿಯರ್, ಗುತ್ತಿಗೆದಾರರು ಹಾಗೂ ಪಿಡಿಒ ವಿರುದ್ಧ ಎಫ್‌ಐಆರ್ ದಾಖಲಾಗಲಿಲ್ಲ ಎಂದು ದೂರಿದರು.

ADVERTISEMENT

ತಕ್ಷಣ ಕೊಣಾಜೆ ಠಾಣಾಧಿಕಾರಿ ರಾಜೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಹಿರಿಯ ಅಧಿಕಾರಿಗಳು ಹೇಳದೇ ಪ್ರಕರಣ ದಾಖಲಿಸುವಂತಿಲ್ಲ, ಈಗಾಗಲೇ ಯುಡಿಆರ್ ದಾಖಲಿಸಿದ್ದೇವೆ ಎಂದು ಠಾಣಾಧಿಕಾರಿ ಹೇಳಿದರು. ‘ಸಂಸದನಾಗಿ ಹೇಳುತ್ತಿದ್ದೇನೆ, ತುರ್ತಾಗಿ ಪ್ರಕರಣ ದಾಖಲಿಸಬೇಕು. ಬಳಿಕ ತನಿಖೆ ನಡೆಸಿ’  ಎಂದು ಬ್ರಿಜೇಶ್ ಚೌಟ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪಾವೂರು, ಮಂಡಲ ಉಪಾಧ್ಯಕ್ಷೆ ಸುಮನಾ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು, ಹೇಮಂತ್ ಶೆಟ್ಟಿ ದೇರಳಕಟ್ಟೆ, ಪ್ರವೀಣ್ ಶೆಟ್ಟಿ ಸಂಪಿಗೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಮಂಡಲ ಕಾರ್ಯದರ್ಶಿ ಕಿಶೋರ್, ಪಾವೂರು ಗ್ರಾ.ಪಂ ಮಾಜಿ ಸದಸ್ಯ ವಾಮನ್ ರಾಜ್ , ಪ್ರೇಮರಾಜ್ ಪಾವೂರು, ಮಂಡಲ ಕಾರ್ಯದರ್ಶಿ ಸುಮಲತಾ ಕೊಣಾಜೆ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಅತುಲ್ ಬಗಂಬಿಲ, ಕೊಣಾಜೆ ಗ್ರಾ.ಪಂ ಸದಸ್ಯರಾದ ಶಶಿಕಲಾ ಕೊಣಾಜೆ, ರಾಜೀವಿ ಶೆಟ್ಟಿ, ವಿಜಯ, ವನಿತಾ, ರೇಷ್ಮಾ, ಹರೇಕಳ ಶಕ್ತಿ ಕೇಂದ್ರದ ಅಧ್ಯಕ್ಷ ಸುಧಾಕರ್ ಗಟ್ಟಿ, ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.