ADVERTISEMENT

ಮಂಗಳೂರಿನಲ್ಲಿ ರಾಷ್ಟ್ರೀಯ ಫಿನ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:05 IST
Last Updated 19 ಡಿಸೆಂಬರ್ 2025, 0:05 IST
<div class="paragraphs"><p>ಈಜು</p></div>

ಈಜು

   

(ಪ್ರಾತಿನಿಧಿಕ ಚಿತ್ರ)

ಮಂಗಳೂರು: ಕರ್ನಾಟಕ ಫಿನ್‌ ಸ್ವಿಮ್ಮಿಂಗ್‌ ಸಂಸ್ಥೆ, ಅಂಡರ್‌ ವಾಟರ್‌ ಸ್ಪೋರ್ಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ, ಫಿಸಿಕಲ್‌ ಎಜುಕೇಷನ್‌ ಫೌಂಡೇಷನ್‌ ಆಫ್‌ ಇಂಡಿಯಾ ಹಾಗೂ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ರಾಷ್ಟ್ರಮಟ್ಟದ ಫಿನ್‌ ಸ್ವಿಮ್ಮಿಂಗ್‌ (ಮೀನಿನ ರೆಕ್ಕೆಯಂಥ ವಸ್ತು–ಫಿನ್‌ಗಳನ್ನು ಪಾದಗಳಿಗೆ ಕಟ್ಟಿ ಈಜುವುದು) ಚಾಂಪಿಯನ್‌ಷಿಪ್‌ ಡಿ.19ರಿಂದ 22ರವರೆಗೆ ನಗರದ ಎಮ್ಮೆಕೆರೆ ಈಜುಕೊಳದಲ್ಲಿ ನಡೆಯಲಿದೆ.

ADVERTISEMENT

8 ವರ್ಷದಿಂದ 70 ವರ್ಷದವರ ವಯೋಮಾನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಮಣಿಪುರ, ನಾಗಾಲ್ಯಾಂಡ್‌, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶದ ಸ್ಪರ್ಧಿಗಳು ಕೂಡ ಸ್ಪರ್ಧಿಸಲಿದ್ದಾರೆ ಎಂದು ಫಿನ್‌ ಸ್ವಿಮ್ಮಿಂಗ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತಪನ್‌ ಕುಮಾರ್‌ ಪಾಣಿಗ್ರಹಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಫಿನ್‌ ಸ್ವಿಮ್ಮಿಂಗ್‌ ಕ್ರೀಡೆಗೆ ಭಾರತದಲ್ಲಿ ಉತ್ತೇಜನ ಸಿಗುತ್ತಿದೆ. 2021ರಲ್ಲಿ ಗೋವಾದ ಪೋಂಡಾದಲ್ಲಿ ಆಯೋಜಿಸಿದ್ದ ಮೊದಲ ಚಾಂಪಿಯನ್‌ಷಿಪ್‌ನಲ್ಲಿ 700ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ನಂತರ 2 ವರ್ಷ ಪುಣೆಯಲ್ಲಿ, ಕಳೆದ ಬಾರಿ ನವದೆಹಲಿಯಲ್ಲಿ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿತ್ತು. ಪ್ರತಿವರ್ಷ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 5ನೇ ಚಾಂಪಿಯನ್‌ಷಿಪ್‌ಗೆ 1,300 ಸ್ಪರ್ಧಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ವಿಮಾನಯಾನ ಸೇವೆಯಲ್ಲಿ ಆಗಿರುವ ಏರುಪೇರಿನಿಂದಾಗಿ ಕೆಲವರಿಗೆ ಮಂಗಳೂರು ತಲುಪಲು ಸಮಸ್ಯೆಯಾಗಿದೆ’ ಎಂದು ಅವರು ಹೇಳಿದರು.

ಫೆಡರೇಷನ್‌ ಪದಾಧಿಕಾರಿಗಳಾದ ರಾಮಕೃಷ್ಣ, ಅಚಿಂತ್ಯ, ರೆಹಾನ್‌ ಸಿದ್ದಿಕಿ ಹಾಗೂ ಬಿ.ಕೆ ನಾಯಕ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.