ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ದೊರೆಯುವುದಾಗಿ ಆಮಿಷವೊಡ್ಡಿ ₹14.36 ಲಕ್ಷ ವಂಚಿಸಿರುವ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಷೇರು ಮಾರುಕಟ್ಟೆಯ ವಿಡಿಯೊ ನೋಡುತ್ತಿರುವಾಗ, ಟೆಲಿಗ್ರಾಂ ಪೇಜ್ ತೆರೆದುಕೊಂಡಿದ್ದು, ಫಿರ್ಯಾದುದಾರರು ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ. ಅದರಲ್ಲಿ ಹೂಡಿಕೆಯ ಬಗ್ಗೆ ಮಾಹಿತಿ ಹಾಗೂ ಲಿಂಕ್ ಬಂದಿದೆ. ಆ ಲಿಂಕ್ ಒತ್ತಿದಾಗ ವಾಟ್ಸ್‌ಆ್ಯಪ್‌ಗೆ ಕನೆಕ್ಟ್ ಆಗಿ, ಸಂದೇಶ ಬಂದಿದೆ. ಆ ಸಂದೇಶದಲ್ಲಿ ತಿಳಿಸಿದಂತೆ ಫಿರ್ಯಾದುದಾರರು 26 ಅಕ್ಟೋಬರ್‌ನಿಂದ 19 ಡಿಸೆಂಬರ್ 2024ರವರೆಗೆ ಒಟ್ಟು ₹14.36 ಲಕ್ಷ ಮೊತ್ತವನ್ನು ಅಪರಿಚಿತರು ನೀಡಿರುವ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಂತರ ಫಿರ್ಯಾದುದಾರರಿಗೆ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.