ADVERTISEMENT

ಮಂಗಳೂರು | ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ₹ 51.80 ಲಕ್ಷ ವಂಚನೆ–ದೂರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:35 IST
Last Updated 30 ಡಿಸೆಂಬರ್ 2025, 8:35 IST
<div class="paragraphs"><p>ಹೂಡಿಕೆ</p></div>

ಹೂಡಿಕೆ

   

(ಐಸ್ಟೋಕ್ ಚಿತ್ರ)

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಆಮಿಷ ಒಡ್ಡಿ ಹಂತ ಹಂತವಾಗಿ ₹51.80 ಲಕ್ಷ ಹಣ  ಕಟ್ಟಿಸಿಕೊಂಡು ವಂಚಿಸಿದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು ಇಲ್ಲಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.        

‘ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್‌ಗೆ ಅಕ್ಟೋಬರ್ ತಿಂಗಿನಲ್ಲಿ ಸಂದೇಶ ಕಳುಹಿಸಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ತಿಳಿಸಿದ್ದರು. ಅವರು ಸೂಚಿಸಿದಂತೆ ವಾಟ್ಸ್‌ ಆ್ಯಪ್ ಗುಂಪೊಂದಕ್ಕೆ ಸೇರಿದ್ದೆ. ಅದರ ಅಡ್ಮಿನ್ ಆಗಿದ್ದ  ದೀಪಾ ರಸಿಮನೆ ಎಂಬುವರು ಹಣ ಹೂಡಿಕೆ ಬಗ್ಗೆ ವಿವರಿಸಿದ್ದರು. ಅವರು ಕಳುಹಿಸಿದ್ದ ಕೊಂಡಿ ಬಳಸಿ ಆ್ಯಪ್ ಒಂದನ್ನು ಡೌನ್ ಲೋಡ್ ಮಾಡಿದ್ದೆ. ಅದರಲ್ಲಿ ದಿನೇಶ್ ಕೆ ವಘೇಲ ಎಂಬುವರು ಹಣ ಹೂಡಿಕೆಗೆ ಸಲಹೆ ನೀಡುತ್ತಿದ್ದರು. ಆ ಆ್ಯಪ್ ಮೂಲಕ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 2025ರ ನ.11ರಿಂದ ಡಿ. 23ರವರೆಗೆ ಒಟ್ಟು ₹ 51.80 ಲಕ್ಷ ಹಣ ಕಳುಹಿಸಿದ್ದೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.