ADVERTISEMENT

ತುಂಬಿ ಹರಿಯುತ್ತಿರುವ ಕುಮಾರಧಾರ, ನೇತ್ರಾವತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:12 IST
Last Updated 15 ಜುಲೈ 2024, 14:12 IST
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವುದು
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವುದು   

ಉಪ್ಪಿನಂಗಡಿ: ಕುಮಾರಧಾರ ಮತ್ತು ನೇತ್ರಾವತಿ ನದಿ ಸೋಮವಾರದಿಂದ ತುಂಬಿ ಹರಿಯುತ್ತಿವೆ.

ಕುಮಾರಧಾರ ನದಿಯಲ್ಲಿ ನೀರಿನ ಪ್ರವಾಹ ಜಾಸ್ತಿ ಇದ್ದು, ನದಿ ಪಾತ್ರದಿಂದ ನಟ್ಟಿಬೈಲ್‌ನಲ್ಲಿ ತೋಟಗಳಿಗೆ ನೀರು ನುಗ್ಗಿದೆ.

ಉಪ್ಪಿನಂಗಡಿಯಲ್ಲಿ ಹವಾಮಾನ ಇಲಾಖೆಯ ಪ್ರಕಾರ ಸೋಮವಾರ 4 ಸೆಂ.ಮೀ., ಭಾನುವಾರ 2 ಸೆಂ.ಮೀ. ಮಳೆ ದಾಖಲಾಗಿದೆ. ಕುಮಾರಧಾರ ಮತ್ತು ನೇತ್ರಾವತಿ ಎರಡೂ ನದಿ ಸಂಗಮ ಸ್ಥಾನದ ಬಳಿ ಶಂಭೂರು ಡ್ಯಾಂನವರು ಅಳವಡಿಸಿರುವ ಮಾಪನದಲ್ಲಿ ಸೋಮವಾರ ಸಂಜೆ ವೇಳೆ ನದಿಯು ಸಮುದ್ರ ಮಟ್ಟದಿಂದ 27 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ದಾಖಲಾಗಿದೆ. ಇಲ್ಲಿನ ಅಪಾಯದ ಮಟ್ಟ 31 ಮೀಟರ್ ಆಗಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಂದಾಯ ಇಲಾಖೆ ಹಾಕಿರುವ ಮಾಪನ ಪ್ರಕಾರ ಅಪಾಯದ ಮಟ್ಟ 26.5 ಆಗಿದ್ದು, ಇಲ್ಲಿ 18 ಮೀಟರ್ ದಾಖಲಾಗಿದೆ.

ADVERTISEMENT

17 ಮೆಟ್ಟಿಲು ಮುಳುಗಡೆ: ಸೋಮವಾರ ಬೆಳಿಗ್ಗೆಯಿಂದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಲೇ ಇದೆ. ನೇತ್ರಾವತಿ ನದಿಯಲ್ಲಿ ಮಧ್ಯಾಹ್ನದ ಬಳಿಕ ನೀರಿನ ಮಟ್ಟ ಏರಿಕೆ ಆಯಿತು. ನದಿ ಪಾತ್ರದಲ್ಲಿರುವ ಸಹಸ್ರಲಿಂಗೇಶ್ವರ ದೇವಸ್ಥಾನದ ಸ್ನಾನಘಟ್ಟದ 36 ಮೆಟ್ಟಿಲುಗಳ ಪೈಕಿ ಸಂಜೆ ವೇಳೆ 19 ಮೆಟ್ಟಿಲು ಮುಳುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.