ADVERTISEMENT

ದ.ಕ ಜಿಲ್ಲಾ ಚೆಸ್ ಚಾಂಪಿಯನ್‌ಷಿಪ್‌: ಪಂಕಜ್ ಭಟ್‌, ರವೀಶ್‌ ಕೋಟೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 3:11 IST
Last Updated 16 ಫೆಬ್ರುವರಿ 2026, 3:11 IST
13 ವರ್ಷದೊಳಗಿನ ಮುಕ್ತ ವಿಭಾಗದ ಕೊನೆಯ ಸುತ್ತಿನಲ್ಲಿ ಧನುಷ್ ವಿರುದ್ಧ ಆಡಿದ ವಿಹಾನ್ ಶೆಟ್ಟಿ  ಪ್ರಜಾವಾಣಿ ಚಿತ್ರ
13 ವರ್ಷದೊಳಗಿನ ಮುಕ್ತ ವಿಭಾಗದ ಕೊನೆಯ ಸುತ್ತಿನಲ್ಲಿ ಧನುಷ್ ವಿರುದ್ಧ ಆಡಿದ ವಿಹಾನ್ ಶೆಟ್ಟಿ  ಪ್ರಜಾವಾಣಿ ಚಿತ್ರ   

ಮಂಗಳೂರು: ಪುತ್ತೂರಿನ ಪಂಕಜ್ ಭಟ್ ಮತ್ತು ಮಂಗಳೂರಿನ ರವೀಶ್ ಕೋಟೆ ಅವರು ಭಾನುವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮುಕ್ತ ವಿಭಾಗ ಮತ್ತು 19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಅಶೋಕನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಪಂಕಜ್ 4.5 ಪಾಯಿಂಟ್‌ಗಳೊಂದಿಗೆ ಟ್ರೋಫಿ ಮತ್ತು ₹ 3500 ನಗದು ಗಳಿಸಿದರು. 4 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆದ ಲಕ್ಷಿತ್ ಸಾಲಿಯಾನ್ ಟ್ರೋಫಿ ಮತ್ತು ₹ 2500 ನಗದು ಗಳಿಸಿದರು. 

ನಗರದ ರವೀಶ್ ಕೋಟೆ 4 ಪಾಯಿಂಟ್‌ಗಳೊಂದಿಗೆ 19 ವರ್ಷದೊಳಗಿನವರ ಮುಕ್ತ ವಿಭಾಗದ ಟ್ರೋಫಿ ತಮ್ಮದಾಗಿಸಿಕೊಂಡರೆ 3 ಪಾಯಿಂಟ್‌ ಗಳಿಸಿದ ಶ್ರೇಯಸ್ ಶಿವಪ್ರಸಾದ್ ರನ್ನರ್ ಅಪ್ ಆದರು. 17 ವರ್ಷದ ಬಾಲಕಿಯರ ಪ್ರಶಸ್ತಿ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವಾ ಗಳಿಸಿದರು. ಅವರು 5 ಪಾಯಿಂಟ್ ಕಲೆ ಹಾಕಿದ್ದರು.

ADVERTISEMENT

17 ವರ್ಷದವರ ಮುಕ್ತ ವಿಭಾಗದಲ್ಲಿ ಪ್ರಣೀತ್ ಎಚ್‌.ಎಸ್ ಮತ್ತು ಆಕಾಂಕ್ಷ್‌ ಯು.ಡಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗಳಿಸಿದರು. ಪ್ರಣೀತ್ 3.5 ಪಾಯಿಂಟ್ ಗಳಿಸಿದರೆ ಆಕಾಂಕ್ಷ್ 3 ಪಾಯಿಂಟ್ ಗಳಿಸಿದರು. 

ಇತರ ವಿಭಾಗಗಳ ಬಹುಮಾನಗಳು: 15 ವರ್ಷದೊಳಗಿನವರ ಮುಕ್ತ ವಿಭಾಗ: ಅಚಿಂತ್ಯ ಭಟ್‌ (4.5)–1, ಆರುಷಿ ಭಟ್ (4.5)–2; ಬಾಲಕಿಯರು: ಆರಾಧ್ಯ ಶೆಟ್ಟಿ (4)–1, ಶ್ರದ್ಧಾ ರೈ (4)–2; 13 ವರ್ಷದೊಳಗಿನ ಮುಕ್ತ ವಿಭಾಗ: ವಿಹಾನ್ ಶೆಟ್ಟಿ (7)–1, ಸಮರ್ಥ್ ಭಟ್ (6)–2, ಬಾಲಕಿಯರು: ರಿಜೆಲಿ ಡಿಸೋಜ (5.5)–1, ಅದ್ವೈಕಾ (5.5)–2; 11 ವರ್ಷದೊಳಗಿನ ಮುಕ್ತ ವಿಭಾಗ: ಯಾಯಿನ್ ಭಟ್‌ (5.5)–1, ಸೋಹನ್ ಫೆರ್ನಾಂಡಿಸ್ (5)–2, ಬಾಲಕಿಯರು: ತಶ್ವಿ ಸಾಲಿಯಾನ್ (4)–1, ಆರುಷಿ ರೈ (4)–2; 9 ವರ್ಷದೊಳಗಿನವರ ಮುಕ್ತ ವಿಭಾಗ: ದೇವವ್ರತನ್ (6)–1, ಜೋಶುವಾ ಜೈಸ್‌ (5)–2, ಬಾಲಕಿಯರು: ಚಾಂದ್ರಿ ಮಧುಕಿರಣ್ (5)–1, ವರೇಣ್ಯ ಶೆಣೈ (4.5)–2; 7 ವರ್ಷದೊಳಗಿನವರ ಮುಕ್ತ ವಿಭಾಗ: ಸುಮೇಧ್‌ ಎನ್‌.ಎಸ್‌ (4)–1, ಅದ್ರಿತ್ ಪ್ರಭು (4)–2, ಬಾಲಕಿಯರು: ಲಿಯೋರ ಜಿಯಾನ (4)–1, ಆದಿರಾ (3.5)–2.

ಉದ್ಘಾಟನೆ: ಉದ್ಯಮಿ ಜ್ಯೋತಿ ಎಸ್ ರಾವ್ ಉದ್ಗಾಟಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಸುಧಾ ಹಾಗೂ ಜಿಲ್ಲಾ ಚೆಸ್ ಸಂಸ್ಥೆಯ ಗೌರವಾಧ್ಯಕ್ಷ ಸುನಿಲ್ ಆಚಾರ್ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಚೆಸ್ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ಕೋಟೆ, ಜಿಲ್ಲಾ ಸಂಸ್ಥೆಯ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್‌, ಕಾರ್ಯದರ್ಶಿ ರಮ್ಯಾ ರೈ, ಉಪಾಧ್ಯಕ್ಷೆ ವಾಣಿ ಪಣಿಕ್ಕರ್‌ ಹಾಗೂ‌ ಜೊತೆ ಕಾರ್ಯದರ್ಶಿ ನಿಶಾ ಪಣಿಕ್ಕರ್ ಬಹುಮಾನ ವಿತರಿಸಿದರು.

ಪಂಕಜ್‌ ಭಟ್  ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.