ADVERTISEMENT

ಆಶ್ಲೇಷಾ ನಕ್ಷತ್ರ: ಕುಕ್ಕೆಯಲ್ಲಿ ಭಕ್ತ ಸಾಗರ

ಈ ವರ್ಷದ ದಾಖಲೆಯ ಆಶ್ಲೇಷ ಬಲಿ ಸೇವೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 23:29 IST
Last Updated 12 ಸೆಪ್ಟೆಂಬರ್ 2023, 23:29 IST
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಂಗಳವಾರ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಂಗಳವಾರ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಆಶ್ಲೇಷಾ ನಕ್ಷತ್ರ ಶುಭ ದಿನವಾದ ಮಂಗಳವಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು. ಈ ವರ್ಷದ ದಾಖಲೆ ಪ್ರಮಾಣದಲ್ಲಿ ಆಶ್ಲೇಷ ಬಲಿ ಸೇವೆ ನಡೆದಿದೆ.

ಆಶ್ಲೇಷಾ ನಕ್ಷತ್ರ ದಿನ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವೆ ನೆರವೇರಿಸುತ್ತಾರೆ.

ಮಂಗಳವಾರ ಬೆಳಿಗ್ಗೆ 1,719 ಆಶ್ಲೇಷ ಬಲಿ ಹಾಗೂ ಸಂಜೆ ಸುಮಾರು 190 ಆಶ್ಲೇಷ ಬಲಿ ಸೇವೆಗಳು ನಡೆದಿವೆ. ಇದು ಈ ವರ್ಷದ ದಾಖಲೆಯಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಕ್ಷೇತ್ರದ ರಥಬೀದಿ ಮತ್ತು ಹೋರಾಂಗಣ ಭಕ್ತರಿಂದ ತುಂಬಿತ್ತು. ಪೇಟೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಗಿತ್ತು. ಸೋಮವಾರ ಸಂಜೆಯಿಂದಲೇ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಬಂದಿದ್ದರು.

ADVERTISEMENT
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಂಗಳವಾರ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.