ADVERTISEMENT

ಪುತ್ತೂರು: ಗಣರಾಜ್ಯೋತ್ಸವ ಪರೇಡ್‌ಗೆ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 11:06 IST
Last Updated 8 ಜನವರಿ 2026, 11:06 IST
<div class="paragraphs"><p>ತ್ರಿವೇಣಿ ಪಲ್ಲತ್ತಾರು</p></div>

ತ್ರಿವೇಣಿ ಪಲ್ಲತ್ತಾರು

   

ಪುತ್ತೂರು: ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಆಯ್ಕೆಯಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯ್ಕೆ ಮಾಡಿದ ರಾಜ್ಯದ 5 ಮಂದಿಯಲ್ಲಿ ಇವರು ಒಬ್ಬರು ಎಂದು ತಿಳಿಸಲಾಗಿದೆ.

ಅಧ್ಯಕ್ಷರ ಅವಧಿಯಲ್ಲಿ ಪ್ರತಿ ವರ್ಷ ಸ್ವಚ್ಚತಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅವರು ಮಾಡಿದ್ದರು. ನೀರು ನೈರ್ಮಲ್ಯ ಸಮಿತಿ ಜೊತೆ ಆರೋಗ್ಯ ಕಾರ್ಯಕರ್ತರನ್ನು ಸೇರಿಸಿಕೊಂಡು ಪೇಟೆಯಲ್ಲಿ ಅಂಗಡಿಗಳ ಸುತ್ತಮುತ್ತ ನೈರ್ಮಲ್ಯದ ಜಾಗೃತಿ ಮೂಡಿಸಿದ್ದರು. ಸಂಜೀವಿನಿ ಒಕ್ಕೂಟದ ಜೊತೆ ಪ್ರತಿ ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸಿದ್ದರು.  

ADVERTISEMENT

ತ್ರಿವೇಣಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿದ್ದಾರೆ. ಉದ್ಯಮಿಯಾಗಿರುವ ಪತಿ ಪ್ರವೀಣ್ ಪಲ್ಲತ್ತಾರು, ಪುತ್ರಿ ಕರಾಟೆ ಪಟು ಸ್ಮೃತಿ ಪಲ್ಲತ್ತಾರು ಹಾಗೂ ಪುತ್ರ ಸೃಜನ್ ಕೆ.ಪಿ ಜೊತೆ ಪಲ್ಲತ್ತಾರಿನಲ್ಲಿ ವಾಸವಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.