ADVERTISEMENT

ಬೆಳ್ತಂಗಡಿ: ವಿವಿಧೆಡೆ ಮಳೆ, ಗಡಾಯಿಕಲ್ಲಿನಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 7:36 IST
Last Updated 24 ಮಾರ್ಚ್ 2024, 7:36 IST
ಮುಂಡಾಜೆ ಸೀಟು ಬಳಿ ಹೆದ್ದಾರಿ ಹಾಗೂ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಯಿತು
ಮುಂಡಾಜೆ ಸೀಟು ಬಳಿ ಹೆದ್ದಾರಿ ಹಾಗೂ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಯಿತು   

ಬೆಳ್ತಂಗಡಿ: ತಾಲ್ಲೂಕಿನ ದಿಡುಪೆ, ನಾರಾವಿ, ಸಂಸೆ ಗಡಿಭಾಗ, ಕಾಜೂರು, ಕೊಲ್ಲಿ, ನಡ, ಇಂದಬೆಟ್ಟು, ನಾವುರದಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಬೆಳ್ತಂಗಡಿ, ಮಡಂತ್ಯಾರು ಸಹಿತ ಇತರ ಕಡೆ ಸಾಧಾರಣ ಮಳೆಯಾಗಿದೆ. ಚಾರ್ಮಾಡಿ, ಮುಂಡಾಜೆಯಲ್ಲಿ ಭಾರಿ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದವು. ಮುಂಡಾಜೆ ಸೀಟು ಬಳಿ ಹೆದ್ದಾರಿ, ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಶನಿವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಗಡಾಯಿಕಲ್ಲು ದಕ್ಷಿಣ ಭಾಗದಲ್ಲಿ ಕಂಡುಬಂದಿತ್ತು. ಸ್ಥಳಕ್ಕೆ ಭೇಟಿ‌ ನೀಡಿರುವ ಅಧಿಕಾರಿಗಳು ಬೆಂಕಿ ನಂದಿಸಲು ತೆರಳಿದ್ದಾರೆ. ಸಿಡಿಲಿನ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ಕಡಬ ತಾಲ್ಲೂಕು ವ್ಯಾಪ್ತಿಯ ಆಲಂಕಾರು, ರಾಮಕುಂಜ, ಕೊಯಿಲದಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ ಆಗಿದೆ.

ಗಡಾಯಿಕಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.