
ಬಂಟ್ವಾಳ: ನವೀಕೃತ ಸೇಂಟ್ ಪ್ಯಾಟ್ರಿಕ್ ಚರ್ಚ್‌ಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟೀಕೃತ ರಸ್ತೆಯನ್ನು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಭಾನುವಾರ ಲೋಕಾರ್ಪಣೆಗೊಳಿಸಿದರು.
20 ಅಡಿ ಅಗಲದ ಸುಮಾರು 180 ಮೀ. ಉದ್ದದ ಈ ರಸ್ತೆಯನ್ನು ₹ 15 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಿಸಲಾಗಿದೆ. ರಮಾನಾಥ ರೈ ಅವರು ಸಚಿವರಾಗಿದ್ದಾಗ ಇದಕ್ಕೆ ಅನುದಾನ ಬಿಡುಗಡೆಯಾಗಿತ್ತು.
ಈ ರಸ್ತೆಗಾಗಿ ಶ್ರಮಿಸಿದ ಉದ್ಯಮಿ ಪಿಯುಸ್ ಎಲ್ ರಾಡ್ರಿಗಸ್, ವಲಯ ಅಧ್ಯಕ್ಷ ಜಯಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಖಂಡರಾದ ದೇವಪ್ಪ ಕರ್ಕೇರ, ಶಿವಾನಂದ ರೈ, ದೇವಪ್ಪ ಕರ್ಕೇರ, ಡೆಂಜಿಲ್ ಅಲ್ಲಿಪಾದೆ, ಸೀತಾರಾಮ ಶೆಟ್ಟಿ, ಬೆನೆಡಿಕ್ಟಾ ಡಿಕೋಸ್ತ, ಮೈಕಲ್ ಮೊರಾಸ್, ಅನಿಲ್ ಡಿಸೋಜ ಎಲ್ಪೇಲ್, ಅನಿಲ್ ರಾಯಿ, ಕೆ.ಪಿ.ಲೋಬೊ, ಅಶೋಕ್ ಪೂಜಾರಿ, ರಾಜೇಶ್ ಪೂಜಾರಿ, ದಾಮೋದರ ಪೂಜಾರಿ, ಗಣೇಶ್ ನಾಯಕ್ ಕರ್ಪೆ, ರಾಜನ್ ಸಾಂತ್ಮಾಯೊರ್ ಚರ್ಚ್ ಪಾಲನ ಮಂಡಳಿಯ ಸದಸ್ಯ ಪ್ರವೀಣ್ ಕ್ರಾಸ್ತಾ, ಜೆರಾಲ್ಡ್ ಡಿಕೋಸ್ತ ಭಾಗವಹಿಸಿದ್ದರು.
ಧರ್ಮ ಗುರು ಡೇನಿಯಲ್ ಡಿಸೋಜ ಧನ್ಯವಾದ ಸಲ್ಲಿಸಿದರು. ಪಾಲನ ಪರಿಷತ್ ಉಪಾಧ್ಯಕ್ಷ ಸುನಿಲ್ ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರವೀಣ್ ಕುಟಿನ್ಹಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.