ಮಂಗಳೂರು: ನಗರದ ನಂತೂರು ಮತ್ತು ಕೆಪಿಟಿ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟರು. ಮೃತರನ್ನು ಶಿವಾನಂದ ಎಂದು ಗುರುತಿಸಲಾಗಿದೆ.ಅವರು ಬಿಕರ್ನಕಟ್ಟೆಯಲ್ಲಿ ಟೈರ್ ದುರಸ್ತಿ ಪಡಿಸುವ ಮಳಿಗೆಯನ್ನು ನಡೆಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ.
ಅವರು ಸ್ಕೂಟರ್ ನಲ್ಲಿ ಪಾದಚಾರಿ ಮಾರ್ಗ ದಿಂದ ಹೆದ್ದಾರಿಯನ್ನು ಪ್ರವೇಶಿಸುವಾಗ ಆಯ ತಪ್ಪಿ ಹೆದ್ದಾರಿ ಮೇಲೆ ಬಿದ್ದರು. ಅಗ ನಂತೂರು ಕಡೆಯಿ.ದ ಬಂದ ಟ್ಯಾಂಕರ್ ನ ಎಡ ಹಿಂಭಾಗದ ಟೈರ್ ಅವರ ತಲೆಮೇಲೆ ಹಾದುಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟ್ಯಾಂಕರ್ ಚಾಲಕ ಸುನೀತ್ ಕೆ. ವಿರುದ್ದ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಶಿವಾನಂದ ಅವರ ಮೃತದೇಹವನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.