ಮಂಗಳೂರು: 'ರಾಯಲ್ ಓಕ್' ಮಳಿಗೆ ಉದ್ಘಾಟನೆ ಸಂಸ್ಥೆಯು ನಗರದ ಮ್ಯಾಕ್ ಮಾಲ್‌ನಲ್ಲಿ ಆರಂಭಿಸಿರುವ ಹೊಸ ಮಳಿಗೆ ಶನಿವಾರ ಕಾರ್ಯಾರಂಭ ಮಾಡಿತು. ಇದು ಸಂಸ್ಥೆಯ 179ನೇ ಹಾಗೂ ರಾಜ್ಯದ 59ನೇ ಮಳಿಗೆಯಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮ್ಯಾಕ್ ಇನ್‌ಫ್ರಾ ರಿಯಲ್ಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅರಬಿ ಕೆ. ಮಾತಾಡಿ, ‘ನವನವೀನ ಶೈಲಿಯ ಪೀಠೋಪಕರಣಗಳನ್ನು ಒಂದೇ ಕಡೆ ಖರೀದಿಸುವ ಅವಕಾಶ ಇಲ್ಲಿದೆ’ ಎಂದರು.
ರಾಯಲ್ ಓಕ್ ಇನ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷ ವಿಜಯ್ ಸುಬ್ರಮಣಿಯಂ, ‘ಈ ಮಳಿಗೆಯಲ್ಲಿ ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಖರೀದಿಸಬಹುದು’ ಎಂದರು.
‘10 ಸಾವಿರ ಚದರ ಅಡಿಗಳಷ್ಟು ವಿಶಾಲವಾದ ಈ ಮಳಿಗೆಯಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್ ಏರಿಯಾ, ಸ್ಟಡಿ & ಆಫೀಸ್, ಔಟ್‌ಡೋರ್, ಹೋಮ್ ಡೆಕೋರ್, ಮ್ಯಾಟ್ರೆಸ್ ಮೊದಲಾದ ಪೀಠೋಪಕರಣ ಲಭ್ಯ. ಪ್ರತಿಯೊಂದು ಖರೀದಿಯನ್ನು ಆಧರಿಸಿ ₹ 14,990 ಮೌಲ್ಯದ ಉಚಿತ ರಿಕ್ಲೈನರ್ ಮತ್ತು ₹ 3 ಸಾವಿರದಿಂದ ₹7 ಸಾವಿರದ ವರೆಗಿನ ಉತ್ಪನ್ನಗಳನ್ನು ಉದ್ಘಾಟನಾ ಕೊಡುಗೆಯಾಗಿ ನೀಡಲಾಗುತ್ತಿದೆ. 'ಕಂಟ್ರಿ ಸ್ಕೋರ್' ವಿಭಾಗದಲ್ಲಿ ಅಮೆರಿಕ, ಇಟಲಿ, ಮಲೇಶಿಯಾ ಮತ್ತು ದೇಶದ ಪೀಠೋಪಕರಣಗಳು ಲಭ್ಯ’ ಎಂದು ನವೀನ್ ತಿಳಿಸಿದರು.
ರಾಯಲ್ ಓಕ್ ಫ್ರಾಂಚೈಸಿಯ ಮುಖ್ಯಸ್ಥ ಕಿರಣ್ ಛಾಬ್ರಿಯಾ, ರಾಯಲ್ ಓಕ್ ವಿಎಂ ಆ್ಯಂಡ್ ಎನ್‌ಎಸ್‌ಓ ಮುಖ್ಯಸ್ಥ ತಮ್ಮಯ್ಯ ಕೊಟೇರ ಮತ್ತು ಫ್ರಾಂಚೈಸಿಯ ಕಾರ್ಯಾಚರಣೆ ವ್ಯವಸ್ಥಾಪಕ ಮಹೇಶ್ ಪಂಡಿತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.