ADVERTISEMENT

ನೆರೆ ಸಂತ್ರಸ್ತರ ನಿಧಿಗೆ ₹10 ಸಾವಿರ ನೀಡಿದ ಬಾಲಕಿ

ಉಡುಗೊರೆಯ ಕೊಡುಗೆ ಬಡವರ ನೆರವಿಗೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:30 IST
Last Updated 27 ಆಗಸ್ಟ್ 2019, 19:30 IST
ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ₹10 ಸಾವಿರದ ಚೆಕ್‌ ನೀಡಿದ ಬಾಲಕಿ ಸನ್ಮತಿ
ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ₹10 ಸಾವಿರದ ಚೆಕ್‌ ನೀಡಿದ ಬಾಲಕಿ ಸನ್ಮತಿ   

ಮಂಗಳೂರು: ತನ್ನ ಹುಟ್ಟಿನ ದಿನಕ್ಕೆ ಅಜ್ಜಿ ನೀಡಿದ ₹10 ಸಾವಿರವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡುವ ಮೂಲಕತೊಕ್ಕೊಟ್ಟು ಸಮೀಪದ ಕಿನ್ಯಾದ ಶಾರದಾ ವಿದ್ಯಾನಿಕೇತನ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಮಾನವೀಯ ಸ್ಪಂದನ ತೋರಿಸಿದ್ದಾಳೆ.

ನಿತ್ಯವೂ ಮಾಧ್ಯಮಗಳಲ್ಲಿ ನೆರೆ ಸಂತ್ರಸ್ತರ ಬವಣೆಯನ್ನು ನೋಡುತ್ತಿದ್ದ ಈಕೆ, ತಾನು ಕೂಡ ನೆರೆ ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ನಿರ್ಧರಿಸಿದಳು.

ಆ.25ರಂದು ಭಾನುವಾರ ಈಕೆಯ ಜನ್ಮ ದಿನ. ತೊಕ್ಕೊಟ್ಟಿನ ಕುತ್ತಾರುಪದವಿನ ಮನೆಯಲ್ಲಿ ಸಂಭ್ರಮದಿಂದ ಆಚರಿಸಿದ್ದರು. ಮರುದಿನ ಸೋಮವಾರ ಶಾಲೆಗೆ ತೆರಳುವ ಮುನ್ನ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿ ಹೋದ ಸನ್ಮತಿ ಚೆಕ್‌ ಅನ್ನು ಜಿಲ್ಲಾಧಿಕಾರಿಗೆ ನೀಡಿದ್ದಾಳೆ. ಪುಟಾಣಿಯ ಈ ಹೃದಯವಂತಿಕೆಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೆನ್ನು ತಟ್ಟಿದರು. ಸನ್ಮತಿ, ಮಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿಯಾಗಿರುವ ನಿತಿನ್ ಪುತ್ರಿ. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.