ಮಂಗಳೂರು: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ರೈಲು ಹಳಿ ಮೇಲೆ ಶನಿವಾರ ಮುಂಜಾನೆ 4.23ಕ್ಕೆ ಬಂಡೆಗಳು ಉರುಳಿದ್ದರಿಂದ ಮೂರು ರೈಲುಗಳನ್ನು ನಿಲ್ದಾಣಗಳಲ್ಲಿ ಕೆಲ ಕಾಲ ನಿಲ್ಲಿಸಲಾಯಿತು.
ಬೆಂಗಳೂರು ಸೆಂಟ್ರಲ್ (ಕೆಎಸ್ಆರ್) - ಕಣ್ಣೂರು ಎಕ್ಸ್‌ಪ್ರೆಸ್ (ನಂ16511) ರೈಲನ್ನು ಕಡಗರವಳ್ಳಿ ನಿಲ್ದಾಣದಲ್ಲಿ, ಬೆಂಗಳೂರು- ಮುರ್ಡೇಶ್ಬರ ಎಕ್ಸ್‌ಪ್ರೆಸ್ (ನಂ 16585) ಮತ್ತು ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (07377) ರೈಲನ್ನು ಸಕಲೇಶಪುರ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು.
ಹಳಿಗೆ ಬಿದ್ದ ಬಂಡೆ ಮತ್ತು ಮಣ್ಣನ್ನು ತೆರವುಗೊಳಿಸಲಾಗಿದೆ. ರೈಲುಗಳು ಬೆಳಿಗ್ಗೆ 9 ಗಂಟೆ 10 ನಿಮಿಷದ ಬಳಿಕ ಈ ಹಳಿಯಲ್ಲಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದ್ದ ರೈಲುಗಳು ಪ್ರಯಾಣ ಮುಂದುವರಿಸಿವೆ.
ನಿಲ್ದಾಣದಲ್ಲಿ ತಾಸು ಗಟ್ಟಲೆ ಕಾಯಬೇಕಾಗಿ ಬಂದಿದ್ದರಿಂದ ಪ್ರಯಾಣಿಕರಿಗೆ ಉಪಾಹಾರ, ಬಿಸ್ಕೆಟ್, ಚಹಾ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.