ಬೆಳ್ತಂಗಡಿ: ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ನೆರಿಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಮಕ್ಕಳ ಚಿತ್ತ ಮಲೆನಾಡಿನ ವೈಭವದತ್ತ’ ಪರಿಕಲ್ಪನೆಯ ಬುಡಕಟ್ಟು ಅಧ್ಯಯನ ಶಿಬಿರದ ಸಮಾರೋಪ ನಡೆಯಿತು.
ಮಲೆಕುಡಿಯ ಸಮುದಾಯದ ಬುಡಕಟ್ಟು ವಿಚಾರಗಳ ಮೂಲ ಅಧ್ಯಯನ, ಮಲೆಕುಡಿಯರ ಮಲೆ ಚಾಮುಂಡೇಶ್ವರಿ ದೇವಸ್ಥಾನ ಜಾತ್ರೆ ವೀಕ್ಷಣೆ, ಸಮುದಾಯದ ಕೆಲವು ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ, ಜಾಗೃತಿ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಮತ್ತು ಮಲೆಕುಡಿಯ ಸಮುದಾಯದವರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.
ಸಮಾರೋಪದ ವಿಚಾರಗೋಷ್ಠಿಯಲ್ಲಿ ಪತ್ರಕರ್ತ ಅಚುಶ್ರೀ ಬಾಂಗೇರು ವಿಚಾರ ಮಂಡಿಸಿದರು.
ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪೌಲ್ ಜಿ.ಅಕ್ವೀನಾಸ್ ವಹಿಸಿದ್ದರು.
ಮಲೆಕುಡಿಯ ಸಮುದಾಯದ ಮುಖಂಡ ಮಂಜಪ್ಪ ಮಲೆಕುಡಿಯ, ನೆರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಭರ್ತಾಜೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಮದನ್ ಕುಮಾರ್ ಕೆ., ಸಾಂಸ್ಕೃತಿಕ ಕಾರ್ಯದರ್ಶಿ ರಾಮಪ್ರಸಾದ್ ಬಿ.ಟಿ ಭಾಗವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತ ನವೀನ್ ನೆರಿಯ ಭಾರತ ಮಾತಾ ಪೂಜೆಯನ್ನು ನೆರವೇರಿಸಿದರು.
ಶಿಬಿರದ ಸಂಯೋಜಕಿ ವಿನುತಾ ಕೆ.ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಆರ್.ಸೂರ್ಯ ವರದಿ ವಾಚಿಸಿದರು. ಮೋಕ್ಷಾ ಬಿ., ಶ್ರೇಯಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರ ನಿರ್ದೇಶಕಿ ಯಶಸ್ವಿನಿ ಬಟ್ಟಂಗಾಯ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಆಸಿಕಾ ಬಿ. ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.