
ಪ್ರಜಾವಾಣಿ ವಾರ್ತೆದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ (ಕೋಟೆಕಾರು ಬ್ಯಾಂಕ್) ಮಧ್ಯಾಹ್ನ 11.30ರಿಂದ 12.30ರ ನಡುವಿನ ಅವಧಿಯಲ್ಲಿ ಐದು ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನಾಭರಣ, ನಗದು ಹೊತ್ತೊಯ್ದಿದ್ದಾರೆ. ದರೋಡೆಕೋರರ ಕೈಯಲ್ಲಿ ಬಂದೂಕು, ತಲವಾರು, ಚಾಕು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ನಲ್ಲಿ ನಾಲ್ಕೈದು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಸಿಬ್ಬಂದಿಗೆ ಬಂದೂಕು ತೋರಿಸಿ ಲಾಕರ್ ಬಾಗಿಲು ತೆಗೆದಿಸಿದ ದರೋಡೆಕೋರರು ಚಿನ್ನ, ನಗದನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಕಳವಾದ ಚಿನ್ನಾಭರಣ, ನಗದು ಅಂದಾಜು ₹ 10-12 ಕೋಟಿ ಇರಬಹುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.