ADVERTISEMENT

ನೀರಿನ ಸಮಸ್ಯೆ : ಇಂದಿರಾ ನಗರ ನಿವಾಸಿಗಳಿಂದ ನೀರಿಗೆ ಆಗ್ರಹ

ಹಳೆಯಂಗಡಿ ಪಂಚಾಯಿತಿ; ಪಂಪ್‌ ಸಿಬ್ಬಂದಿಗೆ ವೇತನ ಆಗಿಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 11:26 IST
Last Updated 14 ಫೆಬ್ರುವರಿ 2020, 11:26 IST
ಮೂಲ್ಕಿ ಬಳಿಯ ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ಭೇಟಿ ನೀಡಿದ ಇಂದಿರಾನಗರದ ನಿವಾಸಿಗಳು ನೀರು ಪೂರೈಕೆಗೆ ಒತ್ತಾಯಿಸಿದರು.
ಮೂಲ್ಕಿ ಬಳಿಯ ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ಭೇಟಿ ನೀಡಿದ ಇಂದಿರಾನಗರದ ನಿವಾಸಿಗಳು ನೀರು ಪೂರೈಕೆಗೆ ಒತ್ತಾಯಿಸಿದರು.   

ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯಿತಿಯ ಹೆಚ್ಚು ಜನ ವಸತಿ ಪ್ರದೇಶವಾಗಿರುವ ಇಂದಿರಾನಗರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಸಸ್ಥಳೀಯ ನಿವಾಸಿಗರು ಪಂಚಾಯಿತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಆಗ್ರಹಿಸಿದರು.

‘ಕುಡಿಯುವ ಬಳಕೆ ಸೇರಿದಂತೆ ಸಹಿತ ಎಲ್ಲದಕ್ಕೂ ಪಂಚಾಯಿತಿ ಪೂರೈಸುವ ನೀರೇ ಇಲ್ಲಿನ ಜನರಿಗೆ ಆಸರೆಯಾಗಿದೆ. ಆದರೆ ಕೆಲವು ದಿನಗಳಿಂದ ಸೂಕ್ತ ಸಮಯದಲ್ಲಿ ನೀರನ್ನು ಬಿಡದೇ ಪಂಪ್ ಚಾಲನಾ ಸಿಬ್ಬಂದಿ ನಿರಾಸಕ್ತಿಯಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಆಡಳಿತಾಧಿಕಾರಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದರು.

ಕಾರ್ಯದರ್ಶಿ ಶ್ರೀಶೈಲ ಪ್ರತಿಕ್ರಿಯಿಸಿ, ‘ ಅನ್ಯ ಕಾರ್ಯ ನಿಮಿತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳೂರಿಗೆ ತೆರಳಿದ್ದರಿಂದ ಅವರ ಗಮನಕ್ಕೆ ತಂದು ಕೂಡಲೇ ಪರಿಹಾರ ನೀಡಲು ಪ್ರಯತ್ನ ನಡೆಸುತ್ತೇನೆ. ಪಂಚಾಯಿತಿಯಲ್ಲಿ ಇದೀಗ ಆಡಳಿತಾಧಿಕಾರಿಗಳ ನೇಮಕವಾಗಿರುವುದರಿಂದ ಹಾಗೂ ನೀರು ಸರಬರಾಜು ಸಮಿತಿಯ ಜವಾಬ್ದಾರಿ ತಡೆ ಹಿಡಿದಿರುವುದರಿಂದ ಈ ಸಮಸ್ಯೆ ಉಂಟಾಗಿದೆ’ ಎಂದರು. ತುರ್ತು ಕ್ರಮದ ಭರವಸೆಯಂತೆ ಜನರು ಹಿಂದುರಿಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.