ADVERTISEMENT

ಸೋಮೇಶ್ವರ ದೇವಾಲಯದಲ್ಲಿ ‘ಯೋಗ ವಿತ್ ಯೋಧ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:29 IST
Last Updated 21 ಜೂನ್ 2025, 14:29 IST
ಸೋಮೇಶ್ವರ ದೇವಸ್ಥಾನದಲ್ಲಿ ಯೋಗ ವಿತ್ ಯೋಧ ಕಾರ್ಯಕ್ರಮ ನಡೆಯಿತು
ಸೋಮೇಶ್ವರ ದೇವಸ್ಥಾನದಲ್ಲಿ ಯೋಗ ವಿತ್ ಯೋಧ ಕಾರ್ಯಕ್ರಮ ನಡೆಯಿತು   

ಮಂಗಳೂರು: ಸೋಮೇಶ್ವರ ದೇವಾಲಯದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ‘ಯೋಗ ವಿತ್ ಯೋಧ’ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು, ಇಲ್ಲಿನ ಜನರ ಸಂಕಲ್ಪ ಶಕ್ತಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳಿಗೆ ತಲುಪಬೇಕು. ಪ್ರವಾಸೋದ್ಯಮದ ಸಾಧ್ಯತೆಗಳನ್ನು ಇನ್ನಷ್ಟು ಪರಿಚಯಿಸುವ ಉದ್ದೇಶದಿಂದ ಕಳೆದ ವರ್ಷ ಸಸಿಹಿತ್ಲುವಿನಲ್ಲಿ ‘ಯೋಗ ವಿತ್ ಯೋಧ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಸೋಮೇಶ್ವರದಲ್ಲಿ ನಡೆಸಲಾಗಿದೆ ಎಂದು ಬ್ರಿಜೇಶ್ ಚೌಟ ಹೇಳಿದರು. ಶೃದ್ಧಾ ಸಂದೇಶ್ ರೈ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಸಲಾಯಿತು.

ಸೋಮನಾಥ ದೇವಸ್ಥಾನದ ವ್ಯವಸ್ಥಾಪಕ ರವೀಂದ್ರ ರೈ, ಸದಾನಂದ ಸುವರ್ಣ, ಸತೀಶ್ ಕುಂಪಲ, ರವೀಂದ್ರ ನಾಥ, ದೀಪಕ್ ಪಿಲಾರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.