
ಹರಿಹರ: ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ಆರತಿ ಮಂಟಪದ ಬಳಿ ನದಿ ದಡದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಭಾನುವಾರ ಬೆಳಿಗ್ಗೆ ಕಾರ್ತಿಕ ಯೋಗ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ 4ಕ್ಕೆ ನೂರಾರು ದೀಪಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಡುವ ಮೂಲಕ ಆರಂಭಗೊAಡ ದೀಪೋತ್ಸವದಲ್ಲಿ ಅಗ್ನಿಹೋತ್ರ ಮುಂತಾದ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಸಂಸ್ಥೆಯ ಶಾಖೆಗಳಿಂದ ಆಗಮಿಸಿದ್ದ 95 ಪುರುಷರು ಮತ್ತು 120 ಮಹಿಳೆಯರು ಯೋಗಾಭ್ಯಾಸ ಮಾಡಿದರು, ನಂತರ ನಡೆದ ಚಿಂತನ-ಮAಥನ ಕಾರ್ಯಕ್ರಮದಲ್ಲಿ ಅತಿಥಿಗಳು ಯೋಗದ ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ ಮಹತ್ವವನ್ನು ವಿವರಿಸಿ, ಸಾರ್ವಜನಿಕರು ದಿನನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಸಂಸ್ಥೆಯ ಪ್ರಾಂತ ಸಂಚಾಲಕ ಕೋಟ್ಯಾನ್ ಹರೀಶಣ್ಣ, ವಲಯ ಸಂಚಾಲಕ ಸತೀಶಣ್ಣ, ವಲಯ ಮಹಿಳಾ ಸಂಚಾಲಕಿ ಮಂಜುಳಕ್ಕ, ಉಪಾಧ್ಯಕ್ಷ ಕಲ್ಲೇಶಣ್ಣ, ಮುಖ್ಯ ಶಿಕ್ಷಕ ವೀರಭದ್ರಣ್ಣ ಸೇರಿದಂತೆ ವಲಯದ ಯೋಗ ಶಿಕ್ಷಕರು, ಅಭ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
........................
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.