ADVERTISEMENT

752 ಮಂದಿಗೆ ಕೊರೊನಾ ವ್ಯಾಕ್ಸಿನ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 15:42 IST
Last Updated 18 ಜನವರಿ 2021, 15:42 IST
ದಾವಣಗೆರೆ ಬಾಷಾನಗರದಲ್ಲಿ ಕೊರೊನಾ ಲಸಿಕೆಯನ್ನು ಶುಶ್ರೂಷಕರಿಗೆ ನೀಡಲಾಯಿತು
ದಾವಣಗೆರೆ ಬಾಷಾನಗರದಲ್ಲಿ ಕೊರೊನಾ ಲಸಿಕೆಯನ್ನು ಶುಶ್ರೂಷಕರಿಗೆ ನೀಡಲಾಯಿತು   

ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಸೋಮವಾರ 13 ಕೇಂದ್ರಗಳಲ್ಲಿ 752 ಮಂದಿಗೆ ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 36 ಕೇಂದ್ರಗಳನ್ನು ಲಸಿಕೆ ನೀಡಲು ಸಜ್ಜುಗೊಳಿಸಲಾಗಿತ್ತು. ಅದರಲ್ಲಿ ಉದ್ಘಾಟನೆಯ ದಿನ 7 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು. ಸೋಮವಾರ 13 ಕೇಂದ್ರಗಳಿಗೆ ವಿಸ್ತರಿಸಲಾಗಿದೆ. ಸಂತೇಬೆನ್ನೂರು, ಕೆರೆಬಿಳಚಿ, ನ್ಯಾಮತಿ, ಮಲೆಬೆನ್ನೂರು ಸಿಎಚ್‌ಸಿ, ಬಾಷಾನಗರ ನಗರ ಆರೋಗ್ಯ ಕೇಂದ್ರ, ಚಾಮರಾಜಪೇಟೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ತಲಾ ಒಂದು ಕೇಂದ್ರ, ಬಾಪೂಜಿ ಆಸ್ಪತ್ರೆಯ ಮೂರು ಕೇಂದ್ರ, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ಎರಡು, ಸಿ.ಜಿ. ಆಸ್ಪತ್ರೆಯ ಎರಡು ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.

1258 ಗುರಿ ನೀಡಲಾಗಿತ್ತು. ಅದರಲ್ಲಿ 752 ಮಂದಿಗೆ ಲಸಿಕೆ ನೀಡಲಾಗಿದೆ. ಶೇ 60 ಸಾಧನೆಯಾಗಿದೆ.

ADVERTISEMENT

8 ಮಂದಿಗೆ ಕೊರೊನಾ: ಜಿಲ್ಲೆಯಲ್ಲಿ 8 ಮಂದಿಗೆ ಕೊರೊನಾ ಇರುವುದು ಸೋಮವಾರ ದೃಢಪಟ್ಟಿದೆ. 16 ಮಂದಿ ಗುಣಮುಖರಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ ಒಬ್ಬ ವಿದ್ಯಾರ್ಥಿ ಸೇರಿ ನಾಲ್ವರು, ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳ ತಲಾ ಇಬ್ಬರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 22,224 ಮಂದಿಗೆ ಸೋಂಕು ತಗುಲಿದೆ. 21,854 ಮಂದಿ ಗುಣಮುಖರಾಗಿದ್ದಾರೆ. 264 ಮಂದಿ ಮೃತಪಟ್ಟಿದ್ದಾರೆ/ 106 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.