ADVERTISEMENT

ದಾವಣಗೆರೆ | ಆನ್‌ಲೈನ್‌ ವಂಚನೆ; ₹1.99 ಲಕ್ಷ ಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2023, 5:55 IST
Last Updated 24 ಮೇ 2023, 5:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಆನ್‌ಲೈನ್ ಉದ್ಯೋಗದ ಮೋಸದ ಜಾಲಕ್ಕೆ ಸಿಲುಕಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ₹ 1.99 ಲಕ್ಷ ಕಳೆದುಕೊಂಡಿದ್ದಾರೆ.

ಎಚ್.ಎಂ. ಪ್ರದೀಪ್‌ ಕುಮಾರ್ ಹಣ ಕಳೆದುಕೊಂಡವರು. ಉದ್ಯೋಗ ಬೇಕಾದಲ್ಲಿ ಸಂಪರ್ಕಿಸುವಂತೆ ಫೇಸ್‌ಬುಕ್‌ನಲ್ಲಿ ಇದ್ದ ಮೊಬೈಲ್‌ ಸಂಖ್ಯೆಗೆ ಮೆಸೇಜ್ ಮಾಡಿದಾಗ ಮನೆಯಲ್ಲೇ ಕೆಲಸ ಎಂಬುದಾಗಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ ಆ್ಯಪ್‌ ಮೂಲಕ ಲಿಂಕ್ ಕಳುಹಿಸಿದ್ದ.

ಲಿಂಕ್ ತೆರೆದಾಗ ಪ್ರಾಡೆಕ್ಟ್‌ ಖರೀದಿಸಿದರೆ ಕಮಿಷನ್ ನೀಡುವ ವಿವರ ಇತ್ತು. ಅದನ್ನು ನಂಬಿ ಲಿಂಕ್‌ ಮೂಲಕ ಖಾತೆ ತೆರೆದಿದ್ದಾರೆ. ಆರಂಭದಲ್ಲಿ ₹300 ಹಾಕಿದಾಗ ₹ 638 ಬಂದಿತ್ತು. ಇದರಿಂದ ಉತ್ತೇಜಿತರಾಗಿ ಅವರ ಮತ್ತು ಅವರ ಪತ್ನಿಯ ಖಾತೆಯಿಂದ ಹಣ ಕಳುಹಿಸಿ ಕಳೆದುಕೊಂಡಿದ್ದಾರೆ. ಸಿಇಎನ್ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.