ADVERTISEMENT

ದಾವಣಗೆರೆ | ಒಂದು ಜನಾಂಗದ ಓಲೈಕೆಗಾಗಿ ಪಠ್ಯ ಪರಿಷ್ಕರಣೆ: ಬಿ.ಸಿ. ನಾಗೇಶ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 8:28 IST
Last Updated 23 ಜೂನ್ 2023, 8:28 IST
ಬಿ.ಸಿ. ನಾಗೇಶ್.
ಬಿ.ಸಿ. ನಾಗೇಶ್.   

ದಾವಣಗೆರೆ: ‘ರಾಜ್ಯ ಸರ್ಕಾರ ಒಂದು ಜನಾಂಗದ ಓಲೈಕೆಗಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿದೆ’ ಎಂದು ಮಾಜಿ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಂತೆ ಯಾವುದೇ ಶಿಕ್ಷಣ ಪಂಡಿತರನ್ನ ಕೇಳಿಲ್ಲ. ನೇರ ಮುಖ್ಯಮಂತ್ರಿ ಅವರ ಮನೆಯಿಂದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಪುಟಕ್ಕೆ ಹೋಗಿದೆ’ ಎಂದರು.

‘ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೆವಾರ್ ಅವರ ಭಾಷಣ ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ಕೆಲ ನಾಯಕರನ್ನ ತೆಗೆದು ಹಾಕುವಂತದ್ದು ಏನಿದೆ ಎಂದು ಕೇಳಿದರೆ ನಾವು ಓದಿಯೇ ಇಲ್ಲ ಎನ್ನುತ್ತಾರೆ. ಇನ್ನು ಪಿಎಚ್‌ಡಿ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ ಯಾಕೆ ಓದಬೇಕು ಎನ್ನುತ್ತಿದ್ದಾರೆ. ವಿವೇಕಾನಂದರ ಪಠ್ಯವನ್ನು ತೆಗೆದು ನೆಹರೂ ಅವರನ್ನ ಸೇರ್ಪಡೆ ಮಾಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ರೋಹಿತ್ ಚಕ್ರತೀರ್ಥ ಹಾಗೂ ಸೂಲಿಬೆಲೆ ಶಿಕ್ಷಣ ಪಂಡಿತರು ಅಲ್ಲ ಎನ್ನುವ ಕಾಂಗ್ರೆಸ್‌ನವರು ಯಾವ ಪಂಡಿತರ ಸಲಹೆ ಪಡೆದು ಪಠ್ಯಬದಲಾವಣೆ, ಪರಿಷ್ಕರಣೆ ಮಾಡಿದ್ದಾರೆ. ಕೆಲ ನಿರುದ್ಯೋಗಿ ಪಂಡಿತರ ಇದ್ದಾರೆ. ಅವರಿಂದ ಹೀಗಾಗಿದೆ’ ಎಂದರು.

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಪಡೆಯುವ ಉದ್ದೇಶದಿಂದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.