ADVERTISEMENT

ದಾವಣಗೆರೆ: ಖುಷಿಯಿಂದಲೇ ಶಾಲೆಗೆ ಮರಳಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 6:59 IST
Last Updated 25 ಅಕ್ಟೋಬರ್ 2021, 6:59 IST
ದಾವಣಗೆರೆಯ ಬಾಪೂಜಿ ಶಾಲೆಯಲ್ಲಿ ಕೊಠಡಿಗಳಿಗೆ ಪ್ರವೇಶಿಸಿದ ಮಕ್ಕಳು
ದಾವಣಗೆರೆಯ ಬಾಪೂಜಿ ಶಾಲೆಯಲ್ಲಿ ಕೊಠಡಿಗಳಿಗೆ ಪ್ರವೇಶಿಸಿದ ಮಕ್ಕಳು   

ದಾವಣಗೆರೆ: ಒಂದೂವರೆ ವರ್ಷದಿಂದ ಆನ್‌ಲೈನ್‌ ಮೂಲಕವೇ ಪಾಠ ಕೇಳುತ್ತಿದ್ದ 1ರಿಂದ 5ನೇ ತರಗತಿವರೆಗಿನ ಮಕ್ಕಳು ಸೋಮವಾರ ಖುಷಿಯಿಂದಲೇ ಶಾಲೆಗೆ ಮರಳಿದರು.

ಶಾಲೆಗಳ ದ್ವಾರಗಳನ್ನು ತಳಿರು ತೋರಣ, ಬಲೂನಿನಿಂದ ಸಿಂಗರಿಸಿ ಮಕ್ಕಳ ಸ್ವಾಗತಕ್ಕೆ ಸಿದ್ಧಗೊಳಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂವು, ಸಿಹಿ ನೀಡಿ ಸ್ವಾಗತಿಸಿದರು. ಪ್ರತಿ ಮಗುವಿನ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಶಾಲೆಯೊಳಗೆ ಬಿಡಲಾಯಿತು. ಇಲ್ಲಿನ ನಿಟುವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಡ್ ವಾದನದ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು. ಒಂದನೇ ತರಗತಿಯ ಮಕ್ಕಳು ತರಗತಿಗೆ ಹಾಜರಾಗಿದ್ದುದರಿಂದ ಶಾಲೆಗಳು ಕಳೆಗಟ್ಟಿದ್ದವು.

ಭಾನುವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಅಂತರ ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಮಾಡಲಾಗಿತ್ತು. ಜಿಲ್ಲೆಯಲ್ಲಿ 1ರಿಂದ 5ನೇ ತರಗತಿವರೆಗೆ 1,34,421 ಮಕ್ಕಳು ನೋಂದಣಿ ಮಾಡಿಸಿದ್ದು, ಶಾಲೆಗೆ ಬಾರದ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ನೀಡಲಾಗುತ್ತದೆ.

‘ಪೋಷಕರೇ ಮಕ್ಕಳನ್ನು ಕರೆತಂದು ಶಾಲೆಗೆ ಬಿಡುತ್ತಿದ್ದಾರೆ. ನಾವೂ ಇಲಾಖೆಯ ನಿರ್ದೇಶನದಂತೆ ಪಾಠ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನ.2ರಿಂದ ಪೂರ್ಣ ಅವಧಿಗೆ ಶಾಲೆ ನಡೆಯಲಿದ್ದು, ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು’ ಎಂದು ಶಿಕ್ಷಕ ಜಯಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.