ADVERTISEMENT

ನಿರಂಜನಾನಂದಪುರಿ ಸ್ವಾಮೀಜಿ ಸೇರಿ ಮೂವರಿಗೆ ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 12:59 IST
Last Updated 1 ಏಪ್ರಿಲ್ 2025, 12:59 IST
<div class="paragraphs"><p>ನಿರಂಜನಾನಂದಪುರಿ ಸ್ವಾಮೀಜಿ, ಎಸ್‌.ಎ.ರವೀಂದ್ರನಾಥ್‌ ಹಾಗೂ ಪ್ರೊ.ಎಸ್‌.ಆರ್‌. ನಿರಂಜನ</p></div>

ನಿರಂಜನಾನಂದಪುರಿ ಸ್ವಾಮೀಜಿ, ಎಸ್‌.ಎ.ರವೀಂದ್ರನಾಥ್‌ ಹಾಗೂ ಪ್ರೊ.ಎಸ್‌.ಆರ್‌. ನಿರಂಜನ

   

ದಾವಣಗೆರೆ: ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್‌.ಆರ್‌. ನಿರಂಜನ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಘೋಷಣೆ ಮಾಡಿದೆ.

‘ಏ.2ರಂದು ನಡೆಯಲಿರುವ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಯೂ ಆಗಿರುವ ಥಾವರ್‌ಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಿದ್ದಾರೆ. ಜೀವರಸಾಯನ ವಿಜ್ಞಾನಿ ಪ್ರೊ.ಪಿ.ಬಲರಾಮ್‌ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಉಪಸ್ಥಿತರಿರುವರು’ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಗೌರವ ಡಾಕ್ಟರೇಟ್‌ಗೆ ಬಂದಿದ್ದ ಅರ್ಜಿಗಳಲ್ಲಿ 5 ಮಾತ್ರ ಕ್ರಮಬದ್ಧವಾಗಿದ್ದವು. ಆಯ್ಕೆ ಸಮಿತಿಯು ಇವುಗಳಲ್ಲಿ ಮೂವರನ್ನು ಪರಿಗಣಿಸಿ ಕುಲಾಧಿಪತಿ ಕಚೇರಿಗೆ ರವಾನಿಸಿತ್ತು. ಧಾರ್ಮಿಕ, ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲು ಸಿಂಡಿಕೇಟ್‌ ಅನುಮೋದನೆ ನೀಡಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.