ADVERTISEMENT

ದಾವಣಗೆರೆ | 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:38 IST
Last Updated 5 ಫೆಬ್ರುವರಿ 2026, 2:38 IST
ಜಿಯಾವುಲ್ಲಾ ಕೆ.
ಜಿಯಾವುಲ್ಲಾ ಕೆ.   

ದಾವಣಗೆರೆ: ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜ.8ರಿಂದ ಈವರೆಗೆ 87,258 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗಿದೆ. 2,343 ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ.

‘ಜಿಲ್ಲೆಯ 3,412 ರೈತರು 11,0762 ಕ್ಕಿಂಟಲ್‌ ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,343 ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಜ.31 ರ ಅಂತ್ಯಕ್ಕೆ ರೈತರು ಮಾರಾಟ ಮಾಡಿರುವ ಮೆಕ್ಕೆಜೋಳಕ್ಕೆ ವ್ಯತ್ಯಾಸದ ಮೊತ್ತವನ್ನು ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

‘ಕುಕ್ಕುಟ ಆಹಾರ ಉತ್ಪಾದಕ ಘಟಕಗಳಿಗೆ 91 ರೈತರು 2,712 ಕ್ವಿಂಟಲ್ ಮೆಕ್ಕೆಜೋಳವನ್ನು ಮಾರಾಟ ಮಾಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) 917 ರೈತರಿಂದ 21,706 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದೆ. ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ರೈತರಿಗೆ ₹ 2,400 ಬೆಲೆ ಸಿಕ್ಕಿದೆ’ ಎಂದು ವಿವರಿಸಿದ್ದಾರೆ.

ADVERTISEMENT

ಕುಕ್ಕವಾಡ: ನೋಂದಣಿ ಇಂದಿನಿಂದ ದಾವಣಗೆರೆ ಶುಗರ್ಸ್‌ ಡಿಸ್ಟಿಲರಿಗೆ ನಿಗದಿಪಡಿಸಿದ ಮೆಕ್ಕೆಜೋಳ ಖರೀದಿಗೆ ಕುಕ್ಕವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಏಜೆನ್ಸಿಯಾಗಿದ್ದು ನೋಂದಣಿ ಪ್ರಕ್ರಿಯೆ ಫೆ.5ರಿಂದ ಆರಂಭವಾಗಲಿದೆ. ‘ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನೋಂದಣಿ ಪ್ರಕ್ರಿಯೆ ನೋಡಿಕೊಳ್ಳುತ್ತಿದೆ. ನೋಂದಾಯಿತ ರೈತರು ಗುಣಮಟ್ಟದ ಮೆಕ್ಕೆಜೋಳವನ್ನು ಹದಡಿ ಗ್ರಾಮ ಪಂಚಾಯಿತಿ ಗೋದಾಮಿಗೆ ತರಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.