ADVERTISEMENT

ಸಂತೇಬೆನ್ನೂರು: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ

bt

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:38 IST
Last Updated 8 ಸೆಪ್ಟೆಂಬರ್ 2024, 15:38 IST
ಸಂತೇಬೆನ್ನೂರಿನ ಶ್ರೀರಾಮ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಶ್ರೀರಾಮ ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ
ಸಂತೇಬೆನ್ನೂರಿನ ಶ್ರೀರಾಮ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಶ್ರೀರಾಮ ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ   

ಸಂತೇಬೆನ್ನೂರು: ಗ್ರಾಮದ ವಿವಿಧೆಡೆ ಶನಿವಾರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಮುನ್ನ ಸಾಂಪ್ರದಾಯಿಕ ವಾದ್ಯ ಮೇಳಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮಾಡಿ ಕರೆತರಲಾಯಿತು.

ಡೊಳ್ಳು, ಮಂಗಳವಾದ್ಯ, ಹಲಗೆಗಳು ವಾದನ ಗಮನ ಸೆಳೆಯಿತು. ಅಲಂಕೃತ ಟ್ರ್ಯಾಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಿತು.

ವಿಭಿನ್ನ ಶೈಲಿಯ ಗಣೇಶ ಮೂರ್ತಿಗಳನ್ನು ತಮ್ಮ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿ, ಪ್ರತಿಷ್ಠಾಸಿದರು. ಮೋದಕ, ಕರ್ಜಿಕಾಯಿ, ಹೋಳಿಗೆ, ಉಂಡೆಗಳ ಪ್ರಸಾದ ವಿನಿಯೋಗ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.