ADVERTISEMENT

ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆ, ಉತ್ತಮ ಮತದಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 4:27 IST
Last Updated 28 ಡಿಸೆಂಬರ್ 2021, 4:27 IST

ದಾವಣಗೆರೆ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ.

ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮ ಪಂಚಾಯಿತಿಯ 5ನೇ ವಾರ್ಡ್‌ಗೆ ನಡೆದ ಮತದಾನದಲ್ಲಿ ಶೇ 80.15ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮ ಪಂಚಾಯಿತಿಯ ಮರಡಿ ವಾರ್ಡ್‌ಗೆ ಸಂಬಂಧಪಟ್ಟಂತೆ ಶೇ 89.13ರಷ್ಟು ಮತದಾನವಾಗಿದೆ.

ADVERTISEMENT

ಕರೇಕಟ್ಟೆ ಗ್ರಾಮ ಪಂಚಾಯಿತಿಯ ಕರೇಕಟ್ಟೆ 2ನೇ ವಾರ್ಡ್‌ಗೆ ಶೇ 73.99 ಮತ ಚಲಾವಣೆಯಾಗಿದೆ. ಅಗರಬನ್ನಿಹಟ್ಟಿ ಪಂಚಾಯಿತಿಯ ಅಗರಬನ್ನಿಹಟ್ಟಿ 1ನೇ ವಾರ್ಡ್‌ಗೆ 80.03 ಮತದಾನವಾಗಿದೆ.

ನ್ಯಾಮತಿ ತಾಲ್ಲೂಕಿನ ವಡಯರಹತ್ತೂರು ಪಂಚಾಯಿತಿಯ ಕೂಗೋನಹಳ್ಳಿ ವಾರ್ಡ್‌ಗೆ 82.02 ಮತದಾನವಾಗಿದೆ.

ಮಾಯಕೊಂಡದಲ್ಲಿ ಕಡಿಮೆ ಮತದಾನ: ಮಾಯಕೊಂಡ ಗ್ರಾಮ ಪಂಚಾಯಿತಿಯ ಆರು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಮತದಾರರು ಉತ್ತಮ ಸ್ಪಂದನೆ ನೀಡಿಲ್ಲ. ಶೇ 63.14ರಷ್ಟು ಮತ ಚಲಾವಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.