ADVERTISEMENT

ಜಗಳೂರು | ಹಲ್ಲೆ ಆರೋಪ: ಪಿಡಿಒ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:53 IST
Last Updated 9 ಫೆಬ್ರುವರಿ 2026, 4:53 IST
   

ಜಗಳೂರು: ‘ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಿಲ್ಲ ಎಂಬ ಕಾರಣ ನೀಡಿ, ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿದ್ದಾರೆ’ ಎಂಬ ದೂರಿನ ಮೇರೆಗೆ ದೊಣೆಹಳ್ಳಿ ಪಿಡಿಒ ಕೊಟ್ರೇಶ್ ಸೇರಿದಂತೆ ಹಲವು ಸದಸ್ಯರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಪವನ ವಿದ್ಯುತ್ ಕಂಪನಿ ಸಿಎಂಇಎಸ್ ಜೂಪಿಟರ್ ರಿನ್ಯೂವಬಲ್ ಸ್ಟೇಷನ್ ಉದ್ಯೋಗಿ ಉಮಾ ಮಹೇಶ್ವರ ರಾವ್ ಸುರಪನೇನಿ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೊಟ್ರೇಶ್ ಹಾಗೂ 30 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ‘ಪವನ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದಂತೆ 2021 ರಿಂದ 2025ರವರೆಗೂ ತೆರಿಗೆ ಪಾವತಿಸಲಾಗಿದೆ. 2025–2026ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಹೊಸ ನಿಯಮ ರೂಪಿಸಿದೆ. ಆದರೆ ಈ ಕುರಿತಂತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದೆ. ಆದರೆ ದೊಣೆಹಳ್ಳಿ, ಹನುಮಂತಾಪುರ, ಹಿರೇಮಲ್ಲನಹೊಳೆ ಪಂಚಾಯಿತಿಗಳ ಅಧಿಕಾರಿಗಳು ಹಾಗೂ ಸದಸ್ಯರು ತೆರಿಗೆ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

‘ಪಿಡಿಒ ಕೊಟ್ರೇಶ್ ಅವರು 25–30 ಜನರ ಗುಂಪು ಕಟ್ಟಿಕೊಂಡು ಹಿರೇಮಲ್ಲನಹೊಳೆಯ ಇಂಧನ ಘಟಕದ ಒಳಗೆ ನುಗ್ಗಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಘಟಕವನ್ನು ಸುಟ್ಟು ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.