ದಾವಣಗೆರೆ: ಇತ್ತೀಚೆಗಷ್ಟೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಬೆಂಬಲಿಗರೊಬ್ಬರ ಸಹೋದರಿಯ ಮದುವೆಗೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಭಾನುವಾರ ಇಲ್ಲಿ ₹ 5 ಲಕ್ಷ ನೆರವು ನೀಡಿದರು.
ಈಚೆಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಜಮೀರ್ ಅಹಮದ್ ಅವರ ಬೆಂಬಲಿಗ, ಹಾವೇರಿ ಜಿಲ್ಲೆಯ ಹಾನಗಲ್‌ನ ಜಾಫರ್ ನಾಗರಹೊಳಿ ಮೃತಪಟ್ಟಿದ್ದರು. ತಂಗಿಯ ವಿವಾಹದ ಸಿದ್ಧತೆಯಲ್ಲಿದ್ದ ಜಾಫರ್ ನಿಧನದಿಂದ ಕುಟುಂಬಕ್ಕೆ ಆರ್ಥಿಕ ತೊಂದರೆ ಉಂಟಾಗಿತ್ತು.
ಈ ಕುರಿತು ಮಾಜಿ ಶಾಸಕ, ‘ಹೆಸ್ಕಾಂ’ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅವರು ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಸಚಿವರ ಗಮನ ಸೆಳೆದರು. ಕೂಡಲೇ ಸ್ಪಂದಿಸಿದ ಸಚಿವರು, ಕುಟುಂಬ ಸದಸ್ಯರಿಗೆ ನಗದು ನೀಡಿ ಜಾಫರ್ ಅವರನ್ನು ಸ್ಮರಿಸಿದರಲ್ಲದೆ, ಅವರ ಸೋದರಿಯ ಮದುವೆಗೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.