ಹರಿಹರ: ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಶಾಸಕ ಬಿ.ಪಿ.ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಎಂಪಿ.ನಾಗಣ್ಣರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಮಾತನಾಡಿ, ಜಿಲಲೆಯಲ್ಲಿ 2ನೇ ದೊಡ್ಡ ನಗರ, ಭೌಗೋಳಿಕವಾಗಿ ರಾಜ್ಯದ ಕೇಂದ್ರಭಾಗದಲ್ಲಿರುವುದು ದಕ್ಷಿಣ, ಉತ್ತರ, ಕಲ್ಯಾಣ ಕರ್ನಾಟಕದ ಸಂಗಮ ಸ್ಥಳ, ಐತಿಹಾಸಿಕ ಹಿನ್ನೆಲೆಯ ಹರಿಹರದಲ್ಲಿ ರಾಜ್ಯೋತ್ಸವವನ್ನು ನಗರಸಭೆಯಿಂದ ಆಚರಿಸುವಂತಾಗಬೇಕೆಂದು ಆಗ್ರಹಿಸಿದರು.
ಸಾಕಷ್ಟು ಜನ ಸಾಹಿತ್ಯಾಸಕ್ತರು, ಹಲವು ಪದವಿ, ಪದವಿ ಪೂರ್ವ ಕಾಲೇಜುಗಳನ್ನು ಹೊಂದಿರುವ ಹರಿಹರದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಸಂಬAಧಿಸಿದ ಚಟುವಟಿಕೆಗಳನ್ನು ಮಾಡಲು ಈವರೆಗೂ ಕನ್ನಡ ಭವನ ಇಲ್ಲದಿರುವುದು ಬೇಸರದ ವಿಷಯವಾಗಿದೆ. ನಗರಸಭೆಯಿಂದ ಸೂಕ್ತ ನಿವೇಶನವನ್ನು ಒದಗಿಸಿ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದರು.
ಸಾಹಿತಿ ಪ್ರೊ.ಸಿ.ವಿ.ಪಾಟೀಲ್, ಪ್ರೊ.ಎಚ್.ಎ.ಭಿಕ್ಷಾವರ್ತಿಮಠ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಡಿ.ಎಂ.ಮAಜುನಾಥಯ್ಯ, ನಗರಸಭೆ ಸದಸ್ಯ ಕೆ.ಬಿ.ರಾಜಶೇಖರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ನಿಜಗುಣ, ಎಚ್.ಕೆ.ಕೊಟ್ರಪ್ಪ, ಶೇಖರ್ ಗೌಡ ಪಾಟೀಲ್, ಬಿ.ಬಿ.ರೇವಣ್ಣನಾಯ್ಕ್, ಎಂ.ಚಿದಾನAದ ಕಂಚಿಕೇರಿ, ಎಸ್.ಎಚ್.ಹೂಗಾರ್, ಡಾ. ಡಿ.ಡಿ.ಸಿಂದಗಿ, ಮಾರುತಿ ಬೇಡರ್, ಎ.ರಿಯಾಜ್ ಅಹ್ಮದ್, ಪಿ.ಜೆ.ಮಹಾಂತೇಶ್, ರಮೇಶ್ ಮಾನೆ , ಪ್ರೀತಮ್ ಬಾಬು, ವೈ.ಕೃಷ್ಣಮೂರ್ತಿ, ಕೆ.ಟಿ.ಗೀತಾ ಕೊಂಡಜ್ಜಿ, ವಿ.ಬಿ.ಕೊಟ್ರೇಶ್, ಜಿಗಳಿ ಪ್ರಕಾಶ್, ಸುರೇಶ್ ಕುಣೆಬೆಳಕೇರಿ, ಎ.ಕೆ.ಭೂಮೇಶ್, ವೀರೇಶ್ ಯಾದವಾಡ್, ಎಚ್. ರಾಜೇಶ್, ಇಮ್ತಿಯಾಜ್ ಜಲಾಲ್, ರುದ್ರಗೌಡ ಆಟೋ, ರಾಹುಲ್ ಮೆಹರವಾಡೆ, ಜಿ.ವಿ.ಪ್ರವೀಣ್, ಶ್ವೇತಾ ಬಿ., ಮಂಜುನಾಥ್ ಪೂಜಾರ್, ಸಂತೋಷ ಗುಡಿಮನಿ, ಆರ್. ಮಂಜುನಾಥ್, ಕೃಷ್ಣ ರಾಜೋಳ್ಳಿ, ಚಂದ್ರಶೇಖರ್ ಕುಂಬಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.