ದಾವಣಗೆರೆ: ಪ್ರೀತಿಸಿ ವಂಚನೆಗೆ ಒಳಗಾದ ಯುವತಿ ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ ಭಾರತ್ ಕಾಲೊನಿಯ ಆಶಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಬಿ.ಈರಣ್ಣ ಎಂಬ ಯುವಕ ಪ್ರೀತಿಸುತ್ತಿದ್ದ. ಮದುವೆಯಾಗಿದ್ದರೂ ಮದುವೆಯಾಗಿಲ್ಲ ಎಂದು ನಂಬಿಸಿ ಜೀವನದಲ್ಲಿ ಆಟವಾಡಿದ. ನನ್ನ ತರಹ ಈಗ ಇನ್ನೊಂದು ಹುಡುಗಿಯ ಜೀವನದಲ್ಲಿ ಆಟವಾಡುತ್ತಿದ್ದಾನೆ. ಆ ಹುಡುಗಿಯ ಜೀವನ ಚೆನ್ನಾಗಿರಲಿ. ಅವನಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ, ಜೀವ ಕಳೆದುಕೊಂಡಿದ್ದಾರೆ.
ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.