ADVERTISEMENT

ಮಾಯಕೊಂಡ | ಸೀಬಾರದಲ್ಲಿ ಮೈಲಾರ ಲಿಂಗೇಶ್ವರನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:40 IST
Last Updated 5 ಫೆಬ್ರುವರಿ 2026, 2:40 IST
ಮಾಯಕೊಂಡ ಸಮೀಪದ ಪರಶುರಾಮಪುರ ಬಳಿಯ ಸೀಬಾರದಲ್ಲಿ ಮೈಲಾರ ಲಿಂಗೇಶ್ವರ ಪೂಜೆಯಲ್ಲಿ ಭಾಗಿಯಾಗಿದ್ದ ಭಕ್ತರು
ಮಾಯಕೊಂಡ ಸಮೀಪದ ಪರಶುರಾಮಪುರ ಬಳಿಯ ಸೀಬಾರದಲ್ಲಿ ಮೈಲಾರ ಲಿಂಗೇಶ್ವರ ಪೂಜೆಯಲ್ಲಿ ಭಾಗಿಯಾಗಿದ್ದ ಭಕ್ತರು   

ಮಾಯಕೊಂಡ: ಮೈಲಾರದಲ್ಲಿ ಕಾರ್ಣಿಕ ದಿನದ ಅಂಗವಾಗಿ ಇಲ್ಲಿಗೆ ಸಮೀಪದ ಸೀಬಾರಕಟ್ಟೆ ಬಳಿ ಬುಧವಾರ ಚಿಕ್ಕ ಮೈಲಾರವೇ ನಿರ್ಮಾಣವಾಗಿತ್ತು. ಜಾತ್ರೆಗೆ ಭಕ್ತ ಸಾಗರ ಸೇರಿತ್ತು. 

ಗೋರವಪ್ಪರು ಹಣೆ ತುಂಬ ಭಂಡಾರ ಹಚ್ಚಿಕೊಂಡು, ಢಮರುಗ ಹಿಡಿದು ಗಮನ ಸೆಳೆದರು. ‘ಏಳುಕೋಟಿ ಏಳು ಕೋಟಿ ಚಾಂಗಮಲೋ’ ಎಂಬ ಭಕ್ತರ ಕೂಗು ಮುಗಿಲು ಮುಟ್ಟಿತ್ತು. 

ಮಾಯಕೊಂಡ, ಆನಗೋಡು ಹೋಬಳಿಯ ಬಹುತೇಕ ಗ್ರಾಮಗಳಿಂದ ಬರುವ ಭಕ್ತರು ದೇವರಿಗೆ ಪ್ರಿಯವಾದ ಬಾಳೆ ಹಣ್ಣು, ಬೆಲ್ಲ, ತುಪ್ಪ ಸೇರಿಸಿ ಗೊರವಪ್ಪರ ದೋಣಿಗಳಲ್ಲಿ ಅರ್ಪಿಸಿ ಪೂಜಿಸಿದರು.

ADVERTISEMENT

ಪ್ರತೀ ವರ್ಷವೂ ಭಕ್ತರು ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸುತ್ತಾರೆ. ಮನೆಗಳಿಂದ ರೊಟ್ಟಿ, ಬುತ್ತಿ, ವಿವಿಧ ರೀತಿಯ ಪಲ್ಯಗಳನ್ನು ತಯಾರಿಸಿಕೊಂಡು ಬಂದು ಇಲ್ಲಿ ಸವಿಯುತ್ತಾರೆ.

ಮೈಲಾರದಲ್ಲಿ ನಡೆಯುವ ಕಾರಣಿಕ ವಾಣಿಯನ್ನು ಕೇಳಿದ ನಂತರ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಮನೆಗಳಿಗೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.