ಚನ್ನಗಿರಿ: ಕುಟುಂಬದಲ್ಲಿ ಸಂತೋಷ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಮತ್ತು ವೈವಾಹಿಕ ಜೀವನದಲ್ಲಿ ಸುಖ ಮತ್ತು ಶಾಂತಿ ಸಿಗಲಿ ಎಂಬ ನಂಬಿಕೆಯಿಂದ ಶ್ರಾವಣ ಮಾಸದ ಮೊದಲ ಮಂಗಳವಾರ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳಗೌರಿ ವ್ರತವನ್ನು ಆಚರಿಸಲಾಯಿತು.
ಶ್ರಾವಣ ಮಾಸದ ಅಂತಿಮ ಮಂಗಳವಾರವದರೆಗೆ ಪ್ರತಿವಾರ ಮಂಗಳಗೌರಿ ವ್ರತವನ್ನು ಮನೆಗಳಲ್ಲಿ ಮಹಿಳೆಯರು ಆಚರಿಸುತ್ತಾರೆ. ಮಂಗಳಗೌರಿ ದೇವಿಯ ವಿಗ್ರಹ ಅಥವಾ ಭಾವಚಿತ್ರವನ್ನು ಕಲಶದೊಂದಿಗೆ ಪ್ರತಿಷ್ಠಾಪಿಸಿ, ಗೌರಿಗೆ ಅರಿಶಿನ, ಕುಂಕುಮ, ಹೂವು, ಹಸಿರು ಬಳೆ, ರವಿಕೆ ಬಟ್ಟೆ, ಹಣ್ಣು ಹಾಗೂ ಸಿಹಿ ತಿಂಡಿಗಳನ್ನು ಇಟ್ಟು ಪೂಜಿಸುವರು. ಮಂಗಳಗೌರಿ ವ್ರತದ ಕಥೆಯನ್ನು ಪಠಣ ಮಾಡಿ, ದೇವಿಗೆ ಆರತಿ ಬೆಳಗಿ, ಕೊನೆಗೆ ನೈವೇದ್ಯ ಅರ್ಪಿಸುತ್ತಾರೆ.
ಪೂಜೆಯ ನಂತರ ಬಾಗಿನವನ್ನು ತಯಾರಿಸಿ, ಸುಮಂಗಲಿಯರಿಗೆ ದಾನವಾಗಿ ನೀಡುವುದು ಈ ವ್ರತದ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.