ADVERTISEMENT

ರಂಜಾನ್‌ ಮಾಸದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 16:35 IST
Last Updated 23 ಏಪ್ರಿಲ್ 2020, 16:35 IST
ಹನುಮಂತರಾಯ
ಹನುಮಂತರಾಯ   

ದಾವಣಗೆರೆ: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ಹಾಗಾಗಿ ಮಸೀದಿ, ದರ್ಗಾಗಳಲ್ಲಿ ರಂಜಾನ್‌ ಮಾಸದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಪ್ರತಿದಿನದ ಐದು ಹೊತ್ತಿನ ಪ್ರಾರ್ಥನೆ, ಶುಕ್ರವಾರದ ಪ್ರಾರ್ಥನೆಗಳನ್ನು ಕೂಡ ಮಸೀದಿಯಲ್ಲಿ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಕ್ ಬಳಸುವಂತಿಲ್ಲ. ಕಡಿಮೆ ಡೆಸಿಬಲ್‌ ಬಳಸಿ ಧ್ವನಿವರ್ಧಕದಲ್ಲಿ ಆಜಾನ್‌ ನೀಡಬಹುದು. ರಂಜಾನ್‌ ತಿಂಗಳಲ್ಲಿ ಬೆಳಿಗ್ಗೆ ಉಪವಾಸ ಹಿಡಿಯುವ, ಸಂಜೆ ಉಪವಾಸ ಬಿಡುವ ಸೂಚನೆ ನೀಡಬಹುದು. ಮಸೀದಿಯಲ್ಲಿ ಇಫ್ತಾರ್‌ ಮಾಡುವಂತಿಲ್ಲ. ಮಸೀದಿಯ ಸುತ್ತಮುತ್ತಲ್ಲಲ್ಲಿ ಕೂಡ ಇಫ್ತಾರ್‌ ಮಾಡಬಾರದು. ಗಂಜಿ, ಜ್ಯೂಸ್‌ ಸಹಿತ ಯಾವುದೇ ಆಹಾರ ಅಲ್ಲಿ ನೀಡಬಾರದು. ಆಹಾರ ಪದಾರ್ಥಗಳ ಅಂಗಡಿಗಳು ಕೂಡ ಮಸೀದಿ ಪಕ್ಕದಲ್ಲಿ ಇಡಬಾರದು. ಆದರೆ ಮನೆಯಲ್ಲಿ ಆಚರಿಸಲು ಯಾವುದೇ ನಿರ್ಬಂಧಿಗಳಿರುವುದಿಲ್ಲ. ಎಲ್ಲರಿಗೂ ಆಹಾರ ಪದಾರ್ಥಗಳು, ಹಾಲು, ಹಣ್ಣು, ತರಕಾರಿ, ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ನಿರ್ಬಂಧವಿಲ್ಲ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.