ADVERTISEMENT

ಮಾಯಕೊಂಡ: ಹುಚ್ಚು ನಾಯಿ ಕಚ್ಚಿ ಹಸು ಸಾವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:35 IST
Last Updated 23 ಡಿಸೆಂಬರ್ 2025, 4:35 IST
ಮಾಯಕೊಂಡ ಹುಚ್ಚು ನಾಯಿ ಕಚ್ಚಿ ಮೃತಪಟ್ಟ ಹಸು 
ಮಾಯಕೊಂಡ ಹುಚ್ಚು ನಾಯಿ ಕಚ್ಚಿ ಮೃತಪಟ್ಟ ಹಸು    

ಮಾಯಕೊಂಡ: ಗ್ರಾಮದಲ್ಲಿ ಭಾನುವಾರ ಹುಚ್ಚು ನಾಯಿ ಕಚ್ಚಿ ಹಸುವೊಂದು ಮೃತಪಟ್ಟಿದೆ.

ಗ್ರಾಮದ ಎಕೆ ಕಾಲೊನಿ ನಿವಾಸಿ ಕರಿಬಸಪ್ಪ ಭಾನುವಾರ ತಮ್ಮ ಮನೆಯ ಬಳಿ ಹಸುವನ್ನು ಕಟ್ಟಿಹಾಕಿದ್ದರು. ಈ ವೇಳೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿತ್ತು. ಹಸುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಆಗಲಿಲ್ಲ. ಅದೇ ದಿನ ಹುಚ್ಚು ನಾಯಿ ಗ್ರಾಮದ ಹಲವು ನಾಯಿಗಳಿಗೆ ಕಚ್ಚಿದೆ.

‘ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು, ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.