ADVERTISEMENT

ದಾವಣಗೆರೆ: ದಾರಿಹೋಕರಿಗೆ ಉಪಟಳ ನೀಡುತ್ತಿದ್ದ ಮುಸಿಯಾ ಸೆರೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 17:05 IST
Last Updated 24 ಆಗಸ್ಟ್ 2023, 17:05 IST
ದಾವಣಗೆರೆಯ ಹಳೇ ಕುಂದುವಾಡದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಮುಸಿಯಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದರು
ದಾವಣಗೆರೆಯ ಹಳೇ ಕುಂದುವಾಡದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಮುಸಿಯಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದರು   

ದಾವಣಗೆರೆ: ಇಲ್ಲಿನ ಹಳೇ ಕುಂದುವಾಡದಲ್ಲಿ ಹಲವು ದಿನಗಳಿಂದ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ದಾಳಿ ಮಾಡುತ್ತಿದ್ದ, ಮನೆಯ ಒಳಗೆ ನುಗ್ಗಿ ಆಹಾರದ ಪದಾರ್ಥಗಳನ್ನು ಒಯ್ಯುತ್ತಿದ್ದ ಮುಸಿಯಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.

ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು, ಮಕ್ಕಳ ಮೇಲೆ ಮುಸಿಯಾ ದಾಳಿ ಮಾಡಿತ್ತು. ಇದರಿಂದ ಮಕ್ಕಳು ಶಾಲೆಗೆ ಹೋಗಲು, ವಾಪಸ್ ಮನೆಗೆ ತೆರಳಲು ಭಯಪಡುತ್ತಿದ್ದರು. ಬೈಕ್‌ನಲ್ಲಿ ಹೋಗುತ್ತಿದ್ದವರ ಹೆಗಲ ಮೇಲೆ ಓಡಿ ಬಂದು ಕೂತು ಕಚ್ಚುತ್ತಿತ್ತು. ಇದರಿಂದ ಹಲವರು ಬಿದ್ದು ಗಾಯಗೊಂಡಿದ್ದರು.

ಮನೆಯ ಹೆಂಚುಗಳನ್ನು ಕೀಳುತ್ತಿತ್ತು. ಮನೆಯೊಳಗೆ ನುಗ್ಗುತ್ತಿತ್ತು. ಮುಸಿಯಾ ಕೀಟಲೆಯಿಂದ ಬೇಸತ್ತು ಹೋಗಿದ್ದ ಜನರು ಅರಣ್ಯ ಇಲಾಖೆ ಉಪಸಂರಕ್ಷಣಾ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು.

ADVERTISEMENT

ದೂರಿನ ಹಿಲ್ಲೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೈದು ದಿನದಿಂದ ಬೋನಿ ಇಟ್ಟಿದ್ದರು. ಗುರುವಾರ ಬೋನಿಗೆ ಮುಸಿಯಾ ಬಿದ್ದಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.