ADVERTISEMENT

ಕೋವಿಡ್‌ | ದಾವಣಗೆರೆ ಜಿಲ್ಲೆಯಲ್ಲಿ ಶತಕ ದಾಟಿದ ಸೋಂಕಿತರ ಸಂಖ್ಯೆ

ಒಂದೇ ದಿನ 22 ಪ್ರಕರಣಗಳ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 12:47 IST
Last Updated 19 ಮೇ 2020, 12:47 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ 22 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.ಇದರೊಂದಿಗೆ ಸೋಂಕಿತರ ಸಂಖ್ಯೆ ಶತಕ (112) ದಾಟಿದೆ.

ಮೇ 7ರಂದು ಮೃತಪಟ್ಟಿರುವ ಮಹಿಳೆಯ (ಪಿ. 694) ಸಂಪರ್ಕದಿಂದ 35 ವರ್ಷದ ಮಹಿಳೆಗೆ (ಪಿ. 1247) ಸೋಂಕು ತಗುಲಿದೆ.

ಮೇ 5 ರಂದು ಮೃತಪಟ್ಟಿರುವ ಮಹಿಳೆಯ (ಪಿ. 662) ಸಂಪರ್ಕದಿಂದ 27 ವರ್ಷದ ಯುವಕ (ಪಿ.1248), 58 ವರ್ಷದ ಮಹಿಳೆ (ಪಿ.1249), 22 ವರ್ಷದ ಯುವತಿ (1250), 14 ವರ್ಷದ ಬಾಲಕ (1252), 5 ವರ್ಷದ ಬಾಲಕಿ (1253) ಹಾಗೂ 35 ವರ್ಷದ ಮಹಿಳೆಗೆ (1372) ಸೋಂಕು ತಗುಲಿದೆ.

ADVERTISEMENT

ರೈತಬೀದಿಯ ಬೆಳ್ಳುಳ್ಳಿ ವ್ಯಾಪಾರಿಯಿಂದ (976) 23 ವರ್ಷದ ಮಹಿಳೆ (1292), 36 ವರ್ಷದ ಮಹಿಳೆ(1293), 11 ವರ್ಷದ ಬಾಲಕ(1370), 13 ವರ್ಷದ ಬಾಲಕಿಗೆ (1371) ವೈರಸ್ ಬಂದಿದೆ.

ಜಾಲಿನಗರದ 70 ವರ್ಷದ ವೃದ್ಧನಿಂದ (633) 30 ಮತ್ತು 31 ವರ್ಷದ ಯುವಕರಿಗೆ (1254, 1255) 40 ವರ್ಷದ ಮಹಿಳೆ (1309) ಸೋಂಕಿಗೆ ಒಳಗಾಗಿದ್ದಾರೆ.

ಮೇ 1 ರಂದು ಮೃತಪಟ್ಟಿರುವ ಜಾಲಿನಗರದ ವೃದ್ಧರ (556) ಸಂಪರ್ಕದಿಂದ 35ವರ್ಷದ ಮಹಿಳೆಗೆ ಕೊರೊನಾ ಬಂದಿದೆ.

ಅಹಮದಾಬಾದಿನಿಂದ ಬಂದ 25 ಮತ್ತು 20 ವರ್ಷದ ಯುವಕರಿಗೆ (1367, 1369), ಕೇರಳದಿಂದ ಬಂದ ಯುವತಿ (1368) ಸೋಂಕಿಗೊಳಗಾಗಿದ್ದಾರೆ.

ಕಂಟೈನ್ ಮೆಂಟ್ ವಲಯದಲ್ಲಿದ್ದ ಕಾರಣ 48 ವರ್ಷದ ವ್ಯಕ್ತಿಗೆ (ಪಿ. 1251) ಹಾಗೂ 69 ವರ್ಷದ ವೃದ್ಧರೊಬ್ಬರಿಗೆ (ಪಿ.1378) ಸೋಂಕು ತಗಲಿದೆ.

ಇದಲ್ಲದೇ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಶಿವಮೊಗ್ಗ ಎಂದು ತೋರಿಸಲಾದ ಪ್ರಕರಣಗಳಲ್ಲಿ ಎರಡು ದಾವಣಗೆರೆಗೆ ಸಂಬಂಧಿಸಿದ್ದಾಗಿದೆ. ಸಂಜೆಯ ಬುಲೆಟಿನ್‌ನಲ್ಲಿ ಸರಿಯಾಗಿದೆ. 18 ಮತ್ತು 19 ವರ್ಷದ ಯುವಕರಿಬ್ಬರು (1365, 1366) ಹೊಸನಗರದಿಂದ ಚನ್ನಗಿರಿಗೆ ಬಂದು ಕ್ವಾರಂಟೈನ್‌ನಲ್ಲಿ ಇದ್ದರು.

ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 112ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.