
ನ್ಯಾಮತಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಉಪನ್ಯಾಸಕರಿದ್ದು, ಗ್ರಂಥಾಲಯ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್. ಸೌಲಭ್ಯಗಳು ಲಭ್ಯ ಇವೆ ಎಂದು ಪ್ರಾಚಾರ್ಯ ಡಿ.ಶಿವಕುಮಾರ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿಯ 200 ವಿದ್ಯಾರ್ಥಿಗಳು ಕಾಲೇಜಿಗೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಬಿ.ಸಿ.ಎ ವಿಭಾಗಗಳಿವೆ. ಕಾಯಂ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರು ಉತ್ತಮ ಬೋಧನೆ ಮಾಡುತ್ತಿದ್ದಾರೆ. ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಸೌಲಭ್ಯಗಳಿವೆ. ಹೈಟೆಕ್ ಗ್ರಂಥಾಲಯವಿದ್ದು, ನುರಿತ ಸಿಬ್ಬಂದಿ ಇದ್ದಾರೆ ಎಂದರು.
ಕೆ.ಪಿ.ಎಸ್. ಶಾಲೆಯ ಉಪನ್ಯಾಸಕರಾದ ಗಂಗಾಧರ ನವುಲೆ, ಕೆ.ಎಲ್. ಶಿವಕುಮಾರ, ಅಮೃತ್, ಅನಿಲಕುಮಾರ, ಯೋಗೇಶ, ಪ್ರವೇಶಾತಿ ಸಂಚಾಲಕಿ ಎನ್.ಜ್ಯೋತಿ, ಆಂಗ್ಲ ಉಪನ್ಯಾಸಕ ರೇವಣಸಿದ್ದಪ್ಪ, ಗ್ರಂಥಾಧಿಕಾರಿ ಜಿ.ಆರ್.ರಾಜಶೇಖರ, ಎಂ.ಎಸ್.ಗಿರೀಶ, ಎಸ್. ರಶ್ಮೀ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.