ನ್ಯಾಮತಿ: ತಾಲ್ಲೂಕಿನ ಕುದುರೆಕೊಂಡ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿ ಬೇಟೆ ಉದ್ದೇಶದಿಂದ ಅರಣ್ಯ ಪ್ರವೇಶ ಮಾಡಿದ್ದ ಆರೋಪಿಯನ್ನು ಬಂಧಿಸಿ ಹೊನ್ನಾಳಿ ಪ್ರಾದೇಶಿಕ ವಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಒ.ಕಿಶೋರನಾಯ್ಕ ತಿಳಿಸಿದರು.
ಚಿನ್ನಿಕಟ್ಟೆ ತಮಿಳು ಕಾಲೊನಿಯ ಮೋಹನ ಬಂಧಿತ. ಆರೋಪಿಗಳಾದ ಚಿನ್ನಿಕಟ್ಟೆಯ ಶಿವಕುಮಾರ, ದಿನೇಶ, ವಡವೇಲು ನಾಪತ್ತೆಯಾಗಿದ್ದಾರೆ.
ಬಿದರಹಳ್ಳಿಯ ಸ.ನಂ.98ರ ಕುದುರೆಕೊಂಡ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಾಡಬಂದೂಕು ಹಿಡಿದು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ಆರೋಪಿಯಿಂದ ಚುಕ್ಕೆ ಜಿಂಕೆಯ ಸುಲಿದ ಹಸಿ ಚರ್ಮ, ಒಂದು ನಾಡ ಬಂದೂಕು, ಬೈಕ್ ವಶಪಡಿಸಿಕೊಂಡಿದ್ದು, 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸಿಎಫ್ ಜಿ.ಆರ್. ಶಶಿಧರ ಮತ್ತು ಎಸಿಎಫ್ ಭಾಗ್ಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಒ.ಕಿಶೋರನಾಯ್ಕ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬರ್ಕತ್ ಅಲಿ, ಎಂ.ಬಿ.ಶಿವಯೋಗಿ, ಜಿ.ಜಿ.ಹಸನ್ ಭಾಷ ಮತ್ತು ಗಸ್ತು ಅರಣ್ಯಪಾಲಕರಾದ ನಾಗಲಿಂಗಪ್ಪ, ಎಚ್.ಬಿ.ಅಂಜಲಿ, ಓ.ಪ್ರಭಾಕರ, ಎಚ್.ಬಿ. ಆಶಾ, ಸಿಬ್ಬಂದಿ ಎಂ.ಪಿ.ಬಸವರಾಜಪ್ಪ, ಪ್ರವೀಣ, ಸುನೀಲ, ಪ್ರದೀಪ, ರಮೇಶ, ಮೌನೇಶಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.