ADVERTISEMENT

ನ್ಯಾಮತಿ | ಸರ್ಕಾರದ ಗ್ಯಾರಂಟಿ ಪ್ರತಿಯೊಬ್ಬರಿಗೂ ತಲುಪಲಿ: ಎಸ್.ಶಿವರಾಮನಾಯ್ಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:06 IST
Last Updated 10 ಏಪ್ರಿಲ್ 2025, 14:06 IST
ನ್ಯಾಮತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ  ತಾಲ್ಲೂಕು ಮಟ್ಟದ ಮೊದಲ ಸಭೆಯನ್ನು ಅಧ್ಯಕ್ಷ ಶಿವರಾಮನಾಯ್ಕ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಸಿದರು
ನ್ಯಾಮತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ  ತಾಲ್ಲೂಕು ಮಟ್ಟದ ಮೊದಲ ಸಭೆಯನ್ನು ಅಧ್ಯಕ್ಷ ಶಿವರಾಮನಾಯ್ಕ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಸಿದರು    

ನ್ಯಾಮತಿ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಮಟ್ಟದ ಅಧ್ಯಕ್ಷ ಎಸ್.ಶಿವರಾಮನಾಯ್ಕ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ರಾಘವೇಂದ್ರ ಮಾತನಾಡಿ, ತಿಂಗಳಿಗೆ ಎರಡು ಬಾರಿ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ನಿಗಾ ವಹಿಸಕು ಎಂದರು.

ADVERTISEMENT

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಅತ್ರೇಯಾ ಪುರಾಣಿಕ್, ಬೆಸ್ಕಾಂ ಎಇಇ ಬಿ.ಕೆ.ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜ್ಯೋತಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮನೋಜ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ರಾಮಚಂದ್ರ ಅವರು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೌಕರ್ಯ, ಸಮರ್ಪಕವಾಗಿ ಪಡಿತರ ವಿತರಣೆ, ಬೆಸ್ಕಾಂ ಸೌಲಭ್ಯಗಳ ಬಗ್ಗೆ ಸದಸ್ಯರು ಹೆಚ್ಚಾಗಿ ಚರ್ಚಿಸಿದರು.

ಸಭೆಯಲ್ಲಿ ನೇತ್ರಾವತಿ, ಆಶಾ, ಕೆ.ಆರ್.ವಸಂತನಾಯ್ಕ, ಮಲ್ಲೇಶಪ್ಪ, ರಾಜಪ್ಪ, ಅಬು ಸಾಹೇಬ್, ಡಿ.ಬಿ.ಪ್ರಕಾಶ, ಎ.ಎಸ್.ಬಿ.ಜಯಪ್ಪ, ಚೇತನ, ಎಸ್.ಕೆ.ತೀರ್ಥಲಿಂಗಪ್ಪ, ಎ.ಜಿ.ಶಿವನಗೌಡ, ಎಚ್.ಮಲ್ಲಿಕಾರ್ಜುನ, ಎಸ್.ಆರ್.ರಮೇಶ, ಮರಡಿ ರಂಗಪ್ಪ, ಪಿಡಿಒ ಎಂ.ಜೆ.ಆಶಾ, ಸಂಗಮೇಶ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.